ತಿರುಮಲ ವೆಂಕಟೇಶ್ವರ ದೇವಸ್ಥಾನ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ತಿರುಪತಿ ಬಳಿ ತಿರುಮಲ ಬೆಟ್ಟದ ಪಟ್ಟಣದಲ್ಲಿದೆ. ಇದು ಪ್ರಸಿದ್ಧ ದೇವಾಲಯವಾಗಿದೆ. ಇದು ಹೈದರಾಬಾದ್ ನಿಂದ ಸುಮಾರು 600 ಕಿ.ಮೀ., ಚೆನ್ನೈ ನಿಂದ 138 ಕಿ.ಮೀ. ಮತ್ತು ಬೆಂಗಳೂರಿನಿಂದ 291 ಕಿ.ಮೀ. ದೂರದಲ್ಲಿದೆ.
ಬೆಟ್ಟವು ಏಳು ಶಿಖರಗಳನ್ನು ಒಳಗೊಂಡಿದೆ. ಇದು ಆದಿಶೇಷನ ಏಳು ತಲೆಗಳನ್ನು ಪ್ರತಿನಿಧಿಸುವುದರಿಂದ ಶೇಷಾಚಲಂ ಎಂದು ಹೆಸರು ಪಡೆದಿದೆ. ಶೇಷಾದ್ರಿ, ನೀಲಾದ್ರಿ, ಗರುಡಾದ್ರಿ, ಅಂಜನಾದ್ರಿ, ವೃಷಭಾದ್ರಿ, ನಾರಾಯಣಾದ್ರಿ ಮತ್ತು ವೆಂಕಟಾದ್ರಿಗಳೇ ಏಳು ಬೆಟ್ಟಗಳು ಎಂದು ಕರೆಯಲಾಗುತ್ತದೆ. ದೇವಾಲಯ ವೆಂಕಟಾದ್ರಿ ಬೆಟ್ಟದ ಮೇಲೆ ಇದೆ. ಇದನ್ನು “ಸೆವೆನ್ ಹಿಲ್ಸ್ ದೇವಾಲಯ” ಎಂದೂ ಕರೆಯಲಾಗುತ್ತದೆ.
ದೇವಾಲಯದ ದೈವವಾದ ವೆಂಕಟೇಶ್ವರ, ವಿಷ್ಣುವಿನ ಅವತಾರ. ಬಾಲಾಜಿ, ಗೋವಿಂದ, ಶ್ರೀನಿವಾಸ, ವೆಂಕಟೇಶ್ವರ ಇತರ ಹೆಸರುಗಳಿಂದ ಕರೆಯಲಾಗುತ್ತದೆ. ನಿತ್ಯ ದೇಗುಲಕ್ಕೆ ಆಪಾರ ಸಂಖ್ಯೆಯ ಭಕ್ತರು ಭೇಟಿ ನೀಡುತ್ತಾರೆ.