
ತಿರುಪತಿ: ವಿಶ್ವದ ಶ್ರೀಮಂತ ದೇವಾಲಯ ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿಗೆ ಎರಡು ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಭಕ್ತರೊಬ್ಬರು ಅರ್ಪಿಸಿದ್ದಾರೆ.
ತಮಿಳುನಾಡಿನ ಥಂಗಾದೊರೈ ಅವರು 3.5 ಕೆಜಿ ತೂಕದ ಚಿನ್ನದ ಶಂಖ ಮತ್ತು ಚಕ್ರವನ್ನು ದೇವರಿಗೆ ಅರ್ಪಿಸಿದ್ದಾರೆ. ಕಳೆದ 50 ವರ್ಷಗಳಿಂದ ತಿರುಪತಿಗೆ ಆಗಾಗ ಆಗಮಿಸಿ ಪೂಜೆ ಸಲ್ಲಿಸುವ ತಮಿಳುನಾಡಿನ ಥೇನಿಯ ಥಂಗಾದೊರೈ ಕೋವಿಡ್ ಲಾಕ್ ಡೌನ್ ಅವಧಿಯಲ್ಲಿ ಅವರು ಅನಾರೊಗ್ಯಕ್ಕೆ ತುತ್ತಾಗಿದ್ದು, ಗುಣಮುಖವಾಗಲು ಪ್ರಾರ್ಥಿಸಿ ತಿರುಪತಿ ತಿಮ್ಮಪ್ಪನಿಗೆ ಹರಕೆ ಹೊತ್ತಿದ್ದರು. ಅಂತೆಯೇ ಅವರು ಗುಣಮುಖರಾಗಿದ್ದು, ಈಗ ದೇವರಿಗೆ ಚಿನ್ನಾಭರಣ ಅರ್ಪಿಸಿದ್ದಾರೆ.