ತಿರುಪತಿ ವಿಶ್ವದ ಶ್ರೀಮಂತ ದೇವಾಲಯವಾಗಿರುವ ತಿರುಪತಿ ತಿರುಮಲ ದೇಗುಲದಲ್ಲಿ ಒಂದೇ ದಿನ 4.39 ಕೋಟಿ ರೂಪಾಯಿ ಕಾಣಿಕೆ ಹರಿದುಬಂದಿದೆ.
ವೈಕುಂಠ ಏಕಾದಶಿ ದಿನವಾದ ಶುಕ್ರವಾರ ಹೆಚ್ಚಿನ ಸಂಖ್ಯೆಯ ಭಕ್ತರು ದರ್ಶನಕ್ಕೆ ಆಗಮಿಸಿದ್ದು, 4.39 ಕೋಟಿ ರೂಪಾಯಿ ಕಾಣಿಕೆ ಹರಿದುಬಂದಿದೆ. ದೇಶ-ವಿದೇಶಗಳ 42,825 ಭಕ್ತರು ವೈಕುಂಠ ದ್ವಾರದ ಮೂಲಕ ದರ್ಶನ ಪಡೆದಿದ್ದಾರೆ. ಕೊರೋನಾ ನಂತರದಲ್ಲಿ ದೇವಾಲಯಕ್ಕೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ.