ತಿರುಪತಿ: ವಿಶ್ವದ ಶ್ರೀಮಂತ ದೇಗುಲ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಒಂದೇ ವರ್ಷ 1451 ಕೋಟಿ ರೂ. ಸಂಗ್ರಹವಾಗಿದೆ.
2021 ರಲ್ಲಿ 833 ಕೋಟಿ ರೂಪಾಯಿ ಸಂಗ್ರಹವಾಗಿದ್ದು, ಇದಕ್ಕಿಂತ ಶೇಕಡ 74 ರಷ್ಟು ಅಧಿಕ ಹಣ ಪ್ರಸಕ್ತ ವರ್ಷದಲ್ಲಿ ಸಂಗ್ರಹವಾಗಿದೆ. 2022 ರಲ್ಲಿ ತಿರುಪತಿ ತಿರುಮಲ ದೇವಾಲಯಕ್ಕೆ 2.3 ಕೋಟಿ ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡಿದ್ದು, 11 ಕೋಟಿ ಲಡ್ಡು ಮಾರಾಟವಾಗಿದೆ.
2022 ಜನವರಿ 1 ರಿಂದ ಡಿಸೆಂಬರ್ 30ರವರೆಗೆ ದೇವಾಲಯದ ಹುಂಡಿಯಲ್ಲಿ 1,451.15 ಕೋಟಿ ರೂಪಾಯಿ ಸಂಗ್ರಹವಾಗಿದೆ. 11.42 ಲಕ್ಷ ಕೋಟಿ ಲಡ್ಡು ಮಾರಾಟ ಮಾಡಲಾಗಿದ್ದು, ಮೂರು ಕೋಟಿಗೂ ಹೆಚ್ಚು ಅನ್ನಪ್ರಸಾದ ವಿತರಿಸಲಾಗಿದೆ.
ಇಂದಿನಿಂದ ವೈಕುಂಠ ಏಕಾದಶಿ ನಡೆಯಲಿದೆ. ಜನವರಿ 2 ರಿಂದ 14 ರವರೆಗೆ ವೈಕುಂಠ ದ್ವಾರದರ್ಶನಕ್ಕೆ ಬರುವ ಭಕ್ತರಿಗೆ ಅನುಕೂಲ ಕಲ್ಪಿಸಲಾಗಿದೆ.