ವಿಶ್ವದ ಶ್ರೀಮಂತ ದೇಗುಲ ತಿರುಪತಿ ತಿರುಮಲ ಸಮೀಪ ನಿರ್ಮಿಸುತ್ತಿರುವ ಕರ್ನಾಟಕ ಭವನ ಡಿಸೆಂಬರ್ ನಲ್ಲಿ ಉದ್ಘಾಟನೆಯಾಗುವ ಸಾಧ್ಯತೆ ಇದೆ. ಇದರಿಂದಾಗಿ ರಾಜ್ಯದ ಯಾತ್ರಾರ್ಥಿಗಳಿಗೆ ಕಡಿಮೆ ದರದಲ್ಲೇ ಕೊಠಡಿಗಳು ಲಭ್ಯವಾಗಲಿವೆ.
ರಾಜ್ಯ ಧಾರ್ಮಿಕ ದತ್ತಿ ಇಲಾಖೆಯಿಂದ ನಿರ್ಮಿಸಿರುವ ಕರ್ನಾಟಕ ಭವನದಲ್ಲಿ ಭಕ್ತರಿಗೆ, ವಿಐಪಿಗಳಿಗೆ ಕುಳಿತುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ರಾಜ್ಯ ಸರ್ಕಾರ 220 ಕೋಟಿ ರೂ. ವೆಚ್ಚದಲ್ಲಿ ಟಿಟಿಡಿ, ಆಂಧ್ರ ಸರ್ಕಾರದ ಸಹಕಾರದೊಂದಿಗೆ ಕಾಮಗಾರಿ ಆರಂಭಿಸಿತ್ತು. 24 ತಿಂಗಳ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳುವ ಹಂತಕ್ಕೆ ಬಂದಿದ್ದು, ಡಿಸೆಂಬರ್ ವೇಳೆಗೆ ಉದ್ಘಾಟನೆಯಾಗುವ ಸಾಧ್ಯತೆ ಇದೆ. ಕರ್ನಾಟಕ ಭವನದಲ್ಲಿ ವಸತಿ ಕೊಠಡಿಗಳೊಂದಿಗೆ ಕಲ್ಯಾಣ ಮಂಟಪ, ಊಟದ ಹಾಲ್ ಕೂಡ ನಿರ್ಮಿಸಲಾಗಿದೆ.