ತಿರುಪತಿ: ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿ ಮತ್ತೊಮ್ಮೆ ಅಧಿಕಾರ ಸ್ವೀಕರಿಸಿರುವ ಬೆನ್ನಲ್ಲೇ ಸಿಎಂ ಚಂದ್ರಬಾಬು ನಾಯ್ಡು ತಿರುಪತಿಯಲ್ಲಿ ಮೊದಲ ಸುಧಾರಣೆ ಕೈಗೊಂಡಿದ್ದು, ಹಿರಿಯ ನಾಗರಿಕರಿಗೆ ಸಿಹಿ ಸುದ್ದಿ ನೀಡಿದ್ದಾರೆ.
65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ತಿರುಪತಿ ವೆಂಕಟೇಶ್ವರನ ದರ್ಶನ ಉಚಿತವಾಗಿ ಪಡೆಯಬಹುದು. ಹೌದು. ತಿರುಪತಿಗೆ ಭೇಟಿ ನೀಡುವ ಹಿರಿಯ ನಾಗರಿಕರಿಗೆ ಉಚಿತ ದರ್ಶನ ಹಾಗೂ ಹಲವು ಸೌಲಭ್ಯಗಳ ವ್ಯವಸ್ಥೆ ಮಾಡಲಾಗಿದೆ.
ಹಿರಿಯ ನಾಗರಿಕರಿಗಾಗಿ ತಿರುಮಲದಲ್ಲಿ ಎರಡು ಸ್ಲಾಟ್‌ಗಳನ್ನು ನಿಗದಿಪಡಿಸಲಾಗಿದೆ. ಒಂದು ಬೆಳಗ್ಗೆ 10 ಗಂಟೆಗೆ ಮತ್ತೊಂದು ಮಧ್ಯಾಹ್ನ 3 ಗಂಟೆಗೆ. ಹಿರಿಯನಾಗರಿಕರು ಫೋಟೋ ಐಡಿ ಜೊತೆಗೆ ವಯಸ್ಸಿನ ಪುರಾವೆಯನ್ನು ಸಲ್ಲಿಸಬೇಕು ಹಾಗೂ S1 ಕೌಂಟರ್‌ಗೆ ವರದಿ ಮಾಡಬೇಕು.
ಸೇತುವೆಯ ಕೆಳಗಿನ ಗ್ಯಾಲರಿಯಿಂದ ದೇವಾಲಯದ ಬಲ ಗೋಡೆಗೆ ರಸ್ತೆ ದಾಟಿದರೆ ಸಾಕು. ಯಾವುದೇ ಮೆಟ್ಟಿಲುಗಳನ್ನು ಹತ್ತಬೇಕಾಗಿಲ್ಲ. ಅತ್ಯುತ್ತಮ ಆಸನಗಳ ವ್ಯವಸ್ಥೆಯೊಂದಿಗೆ ಊಟೋಪಚಾರ ನೀಡಲಾಗುತ್ತದೆ. ಉಚಿತವಾಗಿ ಬಿಸಿ ಬಿಸಿ ಅನ್ನ, ಸಾಂಬಾರ್ , ಮೊಸರು, ಬಿಸಿ ಹಾಲು ಲಭ್ಯವಿದೆ.
ದೇವಾಲಯದ ಎಕ್ಸಿಟ್ ಗೇಟ್‌ನಲ್ಲಿರುವ ಕಾರ್ ಪಾರ್ಕಿಂಗ್ ಪ್ರದೇಶದಿಂದ, ಕೌಂಟರ್‌ನಲ್ಲಿ ಹಿರಿಯ ನಾಗರಿಕರನ್ನು ಡ್ರಾಪ್ ಮಾಡಲು ಬ್ಯಾಟರಿ ಕಾರ್ ಲಭ್ಯವಿದೆ. ಯಾವುದೇ ಒತ್ತಡ ಅಥವಾ ಬಲವಂತವಿಲ್ಲದೆ ಹಿರಿಯ ನಾಗರಿಕರಿಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗುವುದು.
ದರ್ಶನ ಸರದಿಯ ನಂತರ ನೀವು 30 ನಿಮಿಷಗಳಲ್ಲಿ ದರ್ಶನದಿಂದ ನಿರ್ಗಮಿಸಬಹುದು. ಹೆಚ್ಚಿನ ಮಾಹಿತಿಗಾಗಿ ಟಿಟಿಡಿ ಸಹಾಯವಾಣಿ ತಿರುಮಲ 08772277777 ಸಂಪರ್ಕಿಸಬಹುದು.