
ತಿರುಪತಿ: ಟಿಕೆಟ್ ಇಲ್ಲದೆ ಪರದಾಡುತ್ತಿದ್ದ ಭಕ್ತರಿಗೆ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ರಾಜ್ಯದ ಸುಮಾರು 1300 ಭಕ್ತರಿಗೆ ಟಿಟಿಡಿ ಟ್ರಸ್ಟ್ ಸದಸ್ಯರಾಗಿರುವ ಶಾಸಕ ಎಸ್.ಆರ್. ವಿಶ್ವನಾಥ್ ಅವರು ತಿಮ್ಮಪ್ಪನ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದಾರೆ.
ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಭಕ್ತರಿಗೆ ತಿಮ್ಮಪ್ಪನ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮುಂಗಡ ಟಿಕೆಟ್ ಪಡೆಯದ ಕಾರಣ ದೇವಾಲಯದ ಸಿಬ್ಬಂದಿ ತಿರುಮಲ ಬೆಟ್ಟ ಹತ್ತಲು ಅನುಮತಿ ನಿರಾಕರಿಸಿದ್ದಾರೆ. ನಂತರ ದೂರವಾಣಿಯ ಮೂಲಕ ಶಾಸಕ ವಿಶ್ವನಾಥ್ ಅವರನ್ನು ಸಂಪರ್ಕಿಸಲಾಗಿದೆ. ಟಿಟಿಡಿ ಮುಖ್ಯಸ್ಥರು ಮತ್ತು ಅಧಿಕಾರಿಗಳಿಗೆ ಕರೆ ಮಾಡಿದ ವಿಶ್ವನಾಥ್ ಅವರು ಭಕ್ತರಿಗೆ ತಿಮ್ಮಪ್ಪನ ದರ್ಶನಕ್ಕೆ ವ್ಯವಸ್ಥೆ ಮಾಡಿಸಿದ್ದಾರೆ.