ತಿರುಪತಿ: ವಿಶ್ವದ ಶ್ರೀಮಂತ ದೇಗುಲ ತಿರುಪತಿ ತಿರುಮಲ ವೆಂಕಟೇಶ್ವರ ದೇವಾಲಯದಲ್ಲಿ ಜುಲೈ ತಿಂಗಳಲ್ಲಿ ದಾಖಲೆಯ 139.46 ಕೋಟಿ ರೂ. ಸಂಗ್ರಹವಾಗಿದೆ. ದೇವಾಲಯದ ಇತಿಹಾಸದಲ್ಲಿಯೇ ಮಾಸಿಕ ಆದಾಯ 140 ಕೋಟಿ ರೂಪಾಯಿ ತಲುಪಿರುವುದು ಇದೇ ಮೊದಲು ಎಂದು ಟಿಟಿಡಿ ತಿಳಿಸಿದೆ.
ಕಳೆದ ಆರು ತಿಂಗಳಲ್ಲಿ 726 ಕೋಟಿ ರೂಪಾಯಿ ಕಾಣಿಕೆ ಸಂಗ್ರಹವಾಗಿದೆ.
ಫೆಬ್ರವರಿಯಲ್ಲಿ 79.34 ಕೋಟಿ ರೂ.
ಮಾರ್ಚ್ ನಲ್ಲಿ 128.60 ಕೋಟಿ ರೂ.
ಏಪ್ರಿಲ್ ನಲ್ಲಿ 127 ಕೋಟಿ ರೂ.
ಮೇ ನಲ್ಲಿ 130.29 ಕೋಟಿ ರೂ.
ಜೂನ್ ನಲ್ಲಿ 127 ಕೋಟಿ ರೂ.
ಜುಲೈನಲ್ಲಿ 139.46 ಕೋಟಿ ರೂ. ಆದಾಯ ಹರಿದು ಬಂದಿದ್ದು, ಕಳೆದ ಆರು ತಿಂಗಳ ಅವಧಿಯಲ್ಲಿ 726 ಕೋಟಿ ರೂ. ಸಂಗ್ರಹವಾಗಿದೆ.
ಮಾರ್ಚ್ ನಲ್ಲಿ 20.60 ಲಕ್ಷ, ಏಪ್ರಿಲ್ ನಲ್ಲಿ 22.62 ಲಕ್ಷ, ಮೇನಲ್ಲಿ 23.23 ಲಕ್ಷ ಹಾಗೂ ಜುಲೈನಲ್ಲಿ 22.62 ಲಕ್ಷ ಭಕ್ತರು ತಿರುಪತಿ ತಿಮ್ಮಪ್ಪನ ದರ್ಶನ ಪಡೆದುಕೊಂಡಿದ್ದಾರೆ. ತಿಮ್ಮಪ್ಪನ ದರ್ಶನಕ್ಕೆ ಬರುವ ಭಕ್ತರು ಇಷ್ಟಾರ್ಥ ಸಿದ್ಧಿಗೆ ಹರಕೆ, ಕಾಣಿಕೆ ಸಲ್ಲಿಸುತ್ತಾರೆ. ಹೀಗೆ ಕಾಣಿಕೆ ಹುಂಡಿಯಲ್ಲಿ 6 ತಿಂಗಳಲ್ಲಿ 726 ಕೋಟಿ ರೂ. ಸಂಗ್ರಹವಾಗಿದೆ.