
ತಿರುಪತಿ: ತಿರುಪತಿ ತಿರುಮಲದ ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ ಅಪಾರ ಸಂಖ್ಯೆಯ ಭಕ್ತರು ಬಂದಿದ್ದಾರೆ. ಇದರಿಂದಾಗಿ ಸ್ವಾಮಿಯ ದರ್ಶನ ಪಡೆಯಲು 48 ಗಂಟೆಗೂ ಹೆಚ್ಚು ಕಾಲ ಕಾಯುವ ಪರಿಸ್ಥಿತಿ ಎದುರಾಗಿದೆ.
ತಮಿಳು ಪೆರಾತಸಿ ತಿಂಗಳ ಎರಡನೇ ಶನಿವಾರದ ಪ್ರಯುಕ್ತ ಸೆ. 30ರಂದು ಭಕ್ತರ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡು ಬಂದಿದೆ. ಅಲ್ಲದೇ, ಅ. 2ರವರೆಗೆ ಸಾಲು ಸಾಲು ರಜೆ ಕಾರಣ ಹೆಚ್ಚಿನ ಸಂಖ್ಯೆಯ ಭಕ್ತರು ತಿರುಪತಿ ತಿರುಮಲಕ್ಕೆ ಆಗಮಿಸಿದ್ದಾರೆ.
ದೇವರ ದರ್ಶನಕ್ಕೆ ತೆರಳಲು ಐದು ಕಿಲೋಮೀಟರ್ ದೂರದವರೆಗೆ ಸರತಿ ಸಾಲಿನಲ್ಲಿ ಭಕ್ತರು ಕಾದು ನಿಂತ ದೃಶ್ಯ ಕಂಡು ಬಂದಿದೆ. ಟೋಕನ್ ಇಲ್ಲದ ಭಕ್ತರು ದರ್ಶನ ಪಡೆಯಲು 48 ಗಂಟೆಗೂ ಹೆಚ್ಚು ಕಾಲ ಕಾಯಬೇಕಾಗಿತ್ತು. ದರ್ಶನದ ಸರದಿ ಸಾಲು ಸಂಕೀರ್ಣಗಳು ಭರ್ತಿಯಾಗಿದ್ದವು. ವಸತಿ ಕಟ್ಟಡಗಳು ಭರ್ತಿಯಾಗಿವೆ. ಲಕ್ಷಾಂತರ ಭಕ್ತರು ತಿರುಮಲದಲ್ಲಿದ್ದಾರೆ.