ರಾತ್ರಿ ಪೂರ್ತಿ ಪಕ್ಕದಲ್ಲಿ ಮಲಗಿದವರ ಗೊರಕೆ ಸದ್ದಿನಿಂದ ನಿದ್ದೆ ದೂರವಾಗಿದೆಯೇ. ಮೂಗಿನಲ್ಲಿ ಸರಿಯಾಗಿ ಗಾಳಿ ಆಡದಾಗ ಗಂಟಲಿನ ಸ್ನಾಯುಗಳ ಸೆಳೆತದಿಂದ ಕೊಬ್ಬಿನಂಶ ಶೇಖರಗೊಳ್ಳುತ್ತದೆ. ಇದರಿಂದ ಹೊರಹೊಮ್ಮುವ ಸದ್ದೇ ಗೊರಕೆ.
ರಾತ್ರಿ ಮಲಗುವ ಮುನ್ನ ಎರಡು ಚಮಚ ಜೇನುತುಪ್ಪ ಅಥವಾ ಆಲಿವ್ ಆಯಿಲ್ ಸೇವಿಸಿ. ಇದರಿಂದ ಗೊರಕೆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
ಮನೆಯಲ್ಲೇ ತಯಾರಿಸಿದ ಶುದ್ಧ ತುಪ್ಪದ ಎರಡು ಹನಿಯನ್ನು ಮೂಗಿನ ಹೊಳ್ಳೆಗಳಿಗೆ ಬಿಟ್ಟುಕೊಂಡು ಇಲ್ಲವೇ ಚೆನ್ನಾಗಿ ಸವರಿ ಮಲಗಿ ಇದರಿಂದಲೂ ನಿಮ್ಮ ಸಮಸ್ಯೆ ದೂರವಾಗುತ್ತದೆ.
ಮಲಗುವ ಮುನ್ನ ಅರ್ಧ ಲೋಟ ನೀರಿಗೆ ಚಿಟಿಕೆ ಏಲಕ್ಕಿ ಪುಡಿ ಉದುರಿಸಿ ಕುಡಿಯಿರಿ. ಮಲಗುವ ಮುನ್ನ ಒಂದೆರಡು ಬೆಳ್ಳುಳ್ಳಿ ತಿಂದು ಮಲಗಿದರೂ ಗೊರಕೆ ಕಾಡುವುದಿಲ್ಲ. ರಾತ್ರಿ ವೇಳೆ ಮಾಂಸಾಹಾರದಿಂದ ದೂರವಿರಿ. ಗೋಧಿಯ ಹಾಗೂ ಸಕ್ಕರೆಯ ವಸ್ತುಗಳನ್ನು ಸೇವಿಸದಿರಿ.