ಕುತ್ತಿಗೆ ಮತ್ತು ಬೆನ್ನಿನ ಮೇಲ್ಭಾಗಕ್ಕೆ ಸೂರ್ಯನ ಕಿರಣಗಳು ಹಾಗೂ ಧೂಳು ನೇರವಾಗಿ ಬಿದ್ದು ಆ ಭಾಗ ಸದಾ ಕಪ್ಪಾಗಿರುವುದೇ ಹೆಚ್ಚು. ಇದನ್ನು ಮತ್ತೆ ಸಹಜ ಬಣ್ಣಕ್ಕೆ ತರುವ ಮನೆಮದ್ದುಗಳನ್ನು ನೀವೂ ಪ್ರಯತ್ನಿಸಬಹುದು.
ಅಲೋವೇರಾ ಜೆಲ್ ನಿಂದ ಕಪ್ಪಾದ ಈ ಭಾಗವನ್ನು ಸರಿಪಡಿಸಬಹುದು. ಈ ಭಾಗಕ್ಕೆ ಜೆಲ್ ಅನ್ನು ಚೆನ್ನಾಗಿ ಹಚ್ಚಿ. ಕನಿಷ್ಠ ಹತ್ತು ನಿಮಿಷಗಳ ಕಾಲ ಮಸಾಜ್ ಮಾಡಿ. ಇದರಿಂದ ಕುತ್ತಿಗೆ ಸ್ವಚ್ಛವಾಗುತ್ತದೆ.
ಬಾದಾಮಿ ಎಣ್ಣೆ ತ್ವಚೆಗೆ ಸಹಜ ತೇವಾಂಶವನ್ನು ನೀಡುತ್ತದೆ. ಹಾಗಾಗಿ ನಿತ್ಯ ಮಲಗುವ ಮುನ್ನ ಬಾದಾಮಿ ಎಣ್ಣೆಯನ್ನು ಹಚ್ಚಿಕೊಂಡು ಮಲಗಿ. ಬೆಳಗೆದ್ದ ಬಳಿಕ ಸ್ನಾನ ಮಾಡುವುದರಿಂದ ತ್ವಚೆ ಆಕರ್ಷಣೆಯನ್ನೂ ಉಳಿಸಿಕೊಳ್ಳುತ್ತದೆ. ಕಪ್ಪಾದ ಗುರುತೂ ಇಲ್ಲವಾಗುತ್ತದೆ.
ಬೇಕಿಂಗ್ ಸೋಡಾವನ್ನು ನಿಂಬೆಹಣ್ಣಿನ ರಸದ ಜೊತೆ ಸೇರಿಸಿ ಈ ಭಾಗಕ್ಕೆ ಹಚ್ಚಿ ತೊಳೆದರೆ ತ್ವಚೆಯ ರಂಧ್ರಗಳಿಂದ ಧೂಳು ಕೊಳೆ ದೂರವಾಗುತ್ತದೆ. ಸತ್ತ ಜೀವಕೋಶಗಳು ನಿವಾರಣೆಯಾಗಿ ತ್ವಚೆ ಫ್ರೆಶ್ ಆಗಿ ಉಳಿಯುತ್ತದೆ.