ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಲು ಜನರು ಏನೆಲ್ಲ ಕಸರತ್ತು ಮಾಡ್ತಾರೆ. ಆದ್ರೆ ಗುಪ್ತವಾಗಿರುವ ಅಂಗಗಳ ಸೌಂದರ್ಯದ ಬಗ್ಗೆ ಹೆಚ್ಚು ಗಮನ ನೀಡೋದಿಲ್ಲ. ಖಾಸಗಿ ಅಂಗಗಳು ಕಪ್ಪಾಗಿದ್ದರೆ ತಲೆಕೆಡಿಸಿಕೊಳ್ಳೋದಿಲ್ಲ. ಖಾಸಗಿ ಅಂಗ ಕಪ್ಪಾಗಲು ಸ್ವಚ್ಛತೆಯ ಕೊರತೆಯೇ ಕಾರಣ.
ದುಬಾರಿ ವೆಚ್ಛದ ಉತ್ಪನ್ನ ಬಳಸಿ ಕಪ್ಪು ಕಲೆ ದೂರಮಾಡಿಕೊಳ್ಳಬೇಕೆಂದೇನೂ ಇಲ್ಲ. ಕೆಲ ಟಿಪ್ಸ್ ಅನುಸರಿಸಿ ಕಪ್ಪು ಕಲೆಯನ್ನು ದೂರ ಮಾಡಿಕೊಳ್ಳಬಹುದು.
ಕೆಲವೊಮ್ಮೆ ಖಾಸಗಿ ಭಾಗಗಳಲ್ಲಿರುವ ಕೂದಲುಗಳು ಈ ಸಮಸ್ಯೆಗೆ ಕಾರಣವಾಗುತ್ತದೆ. ಹಾಗಾಗಿ ಕೂದಲು ತೆಗೆದು ಸ್ವಚ್ಛವಾಗಿಟ್ಟುಕೊಳ್ಳಿ. ನೆನಪಿರಲಿ ಕೂದಲು ಸ್ವಚ್ಛಗೊಳಿಸುವ ವೇಳೆ ಬಟ್ಟೆ ಬಳಸಬೇಡಿ.
ನಿಮ್ಮ ಡಯೆಟ್ ನಲ್ಲಿ ಬೆಳ್ಳುಳ್ಳಿ ಉಪಯೋಗಿಸಿ. ಪ್ರತಿದಿನ ಬೆಳ್ಳುಳ್ಳಿ ಸೇವನೆ ಮಾಡುವುದರಿಂದ ನೈಸರ್ಗಿಕವಾಗಿಯೇ ನಿಮ್ಮ ಖಾಸಗಿ ಅಂಗ ಸ್ವಚ್ಛವಾಗಿರುತ್ತದೆ.
ಬೆಚ್ಚಗಿನ ನೀರಿನಲ್ಲಿ ಖಾಸಗಿ ಅಂಗಗಳನ್ನು ಸ್ವಚ್ಛಗೊಳಿಸಿಕೊಳ್ಳೋದ್ರಿಂದ ಕಪ್ಪು ಕಲೆ ದೂರವಾಗುತ್ತದೆ. ಜೊತೆಗೆ ಸೋಂಕಿನ ಭಯ ದೂರವಾಗುತ್ತದೆ. ಬಿಸಿ ನೀರು ಬಳಸುವ ವೇಳೆ ನೀರು ತುಂಬಾ ಬಿಸಿಯಾಗಿರದಂತೆ ನೋಡಿಕೊಳ್ಳಿ.
ಪ್ರತಿದಿನ ನಿಮ್ಮ ಒಳ ಉಡುಪನ್ನು ಬದಲಾಯಿಸಿ. ಕಾಟನ್ ಒಳ ಉಡುಪನ್ನು ಬಳಸಿ. ಕೊಳಕಾದ ಒಳ ಉಡುಪು ಕೂಡ ಖಾಸಗಿ ಅಂಗ ಕಪ್ಪಾಗಲು ಕಾರಣವಾಗುತ್ತದೆ.
ಖಾಸಗಿ ಅಂಗ ಸ್ವಚ್ಛಗೊಳಿಸಲು ಸೋಪ್ ಬಳಸಬೇಡಿ. ಆ ಅಂಗ ಸೂಕ್ಷ್ಮವಾಗಿರುವುದರಿಂದ ಸೋಪ್ ಬಳಕೆ ಬೇಡ. ಪೇಸ್ ವಾಶ್ ನಿಂದ ಖಾಸಗಿ ಅಂಗ ಸ್ವಚ್ಛಗೊಳಿಸಿಕೊಳ್ಳಿ.