ಸೌಂದರ್ಯ ಅಂದ್ರೆ ಮುಖವೆಂದು ಅನೇಕರು ಭಾವಿಸಿದ್ದಾರೆ. ಆದ್ರೆ ಕುತ್ತಿಗೆ ಸೌಂದರ್ಯದ ಬಗ್ಗೆ ಗಮನ ನೀಡುವುದಿಲ್ಲ. ಇದೇ ಕಾರಣಕ್ಕೆ ಕೆಲವರ ಕುತ್ತಿಗೆ ಬಣ್ಣ ಕಪ್ಪಾಗಿರುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಸೌಂದರ್ಯ ವರ್ದಕದಿಂದ ಕುತ್ತಿಗೆ ಬೆಳ್ಳಗಾಗುವುದು ಕಷ್ಟ. ಮನೆಯಲ್ಲಿರುವ ಪದಾರ್ಥ ಬಳಸಿ ಕುತ್ತಿಯನ್ನು ಬೆಳ್ಳಗೆ ಮಾಡಬಹುದು.
ಬಾದಾಮಿ ಎಣ್ಣೆಯಲ್ಲಿ ವಿಟಮಿನ್ ಇ, ಬ್ಲೀಚಿಂಗ್ ಗುಣಗಳಿವೆ. ಇದು ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ. ಹತ್ತಿ ಮೇಲೆ ಹನಿ ಬಾದಾಮಿ ಎಣ್ಣೆಯನ್ನು ಹಾಕಿ ಕುತ್ತಿಗೆಗೆ ಹಚ್ಚಬೇಕು. ನಂತ್ರ ಕುತ್ತಿಗೆಯನ್ನು ಮಸಾಜ್ ಮಾಡಬೇಕು. ಕೆಲವು ದಿನಗಳವರೆಗೆ ಇದನ್ನು ಮಾಡಿದ್ರೆ ಕತ್ತು ಬೆಳ್ಳಗಾಗುತ್ತದೆ.
ಅಲೋವೆರಾ ಜೆಲ್ ಕತ್ತಿನ ಬಣ್ಣ ಬದಲಿಸಲು ಪ್ರಯೋಜನಕಾರಿ. ಅಲೋವೆರಾ ಜೆಲ್ ಹಾಕಿ ಕತ್ತಿಗೆ ಮಸಾಜ್ ಮಾಡಬೇಕು. 30 ನಿಮಿಷಗಳ ನಂತ್ರ ಶುದ್ಧ ನೀರಿನಲ್ಲಿ ಸ್ವಚ್ಛಗೊಳಿಸಬೇಕು.
ಆಪಲ್ ಸೈಡರ್ ವಿನೆಗರ್ ಬಳಕೆಯಿಂದ ಕತ್ತಿನ ಬಣ್ಣ ಬದಲಾಗುತ್ತದೆ. ಚರ್ಮದ ಪಿಹೆಚ್ ಮಟ್ಟವನ್ನು ಸಮತೋಲನಗೊಳಿಸಲು ಮತ್ತು ಸತ್ತ ಚರ್ಮದ ಕೋಶಗಳನ್ನು ಸ್ವಚ್ಛಗೊಳಿಸಲು ನೆರವಾಗುತ್ತದೆ. 2 ಚಮಚ ಆಪಲ್ ಸೈಡರ್ ವಿನೆಗರ್ ನಲ್ಲಿ ಕೆಲವು ಹನಿ ನೀರನ್ನು ಹಾಕಿ, ಮಿಶ್ರಣ ತಯಾರಿಸಿಕೊಳ್ಳಿ. ಇದನ್ನು 5-7 ನಿಮಿಷಗಳ ಕಾಲ ಇರಿಸಿ, ನಂತರ ಶುದ್ಧ ನೀರಿನಿಂದ ತೊಳೆಯಿರಿ.