ಬದಲಾಗುತ್ತಿರುವ ಜೀವನ ಶೈಲಿ ಹಾಗೂ ಕೆಲಸದ ಒತ್ತಡದಲ್ಲಿ ಜನರು ಆರೋಗ್ಯವನ್ನು ನಿರ್ಲಕ್ಷಿಸುತ್ತಾರೆ. ಇದ್ರಿಂದಾಗಿ ಶೇಕಡಾ 70ರಷ್ಟು ಮಂದಿ ಗ್ಯಾಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಇದು ಹೊಟ್ಟೆ ನೋವು, ತಲೆ ನೋವು, ಮಾನಸಿಕ ಸಮಸ್ಯೆಗೂ ಕಾರಣವಾಗುತ್ತದೆ. ಗ್ಯಾಸ್ ಕಾಣಿಸಿಕೊಂಡ ತಕ್ಷಣ ಮಾತ್ರೆ ನುಂಗುವ ಅಭ್ಯಾಸ ಅನೇಕರಿಗಿದೆ. ಮಾತ್ರೆ ತಾತ್ಕಾಲಿಕ. ಮಾತ್ರೆ ಬದಲು ನಾವು ಹೇಳುವ ಟಿಪ್ಸ್ ಪಾಲಿಸಿದ್ರೆ ಗ್ಯಾಸ್ ಸಮಸ್ಯೆಗೆ ಶಾಶ್ವತವಾಗಿ ಗುಡ್ ಬಾಯ್ ಹೇಳಬಹುದಾಗಿದೆ.
ಸಾಧ್ಯವಾದಷ್ಟು ಮನೆಯ ಆಹಾರವನ್ನು ಸೇವನೆ ಮಾಡಿ. ಅನಿವಾರ್ಯವಾದಾಗ ಹೊಟೇಲ್ ನಲ್ಲಿ ಮಸಾಲೆಯಿಲ್ಲದ ಆಹಾರವನ್ನು ಆಯ್ಕೆ ಮಾಡಿಕೊಳ್ಳಿ. ಹೊಟೇಲ್ ಆಹಾರ ಅಪೌಷ್ಠಿಕವಾಗಿರುತ್ತದೆ. ಜೊತೆಗೆ ಸ್ವಚ್ಛವಾಗಿರುವುದಿಲ್ಲ. ಕೆಟ್ಟ ತೈಲ ಹಾಗೂ ಮಸಾಲೆ ಬಳಸಿ ಆಹಾರ ತಯಾರಿಸುವುದ್ರಿಂದ ಗ್ಯಾಸ್ ಸಮಸ್ಯೆ ಕಾಡೋದು ಸಾಮಾನ್ಯವಾಗುತ್ತದೆ. ಹಾಗಾಗಿ ಮಸಾಲೆ ರಹಿತ ಹೊಟೇಲ್ ಆಹಾರ ಸೇವನೆ ಮಾಡುವುದು ಒಳ್ಳೆಯದು.
ಎಂಟಿಬಯೋಟಿಕ್ ಮಾತ್ರೆಗಳು ಹೊಟ್ಟೆಯಲ್ಲಿ ಗ್ಯಾಸ್ ಉತ್ಪತ್ತಿ ಮಾಡುತ್ತವೆ. ಈ ಮಾತ್ರೆಗಳಿಂದ ಜೀರ್ಣಕ್ರಿಯೆ ನಿಧಾನವಾಗುತ್ತದೆ. ಇದು ಗ್ಯಾಸ್ ಸಮಸ್ಯೆಗೆ ಕಾರಣವಾಗುತ್ತದೆ. ವೈದ್ಯರ ಸಲಹೆ ಪಡೆದು ಎಂಟಿಬಯೋಟಿಕ್ ಮಾತ್ರೆಯಿಂದ ಆದಷ್ಟು ದೂರವಿರಿ.
ಸಮಯದ ಅಭಾವದಿಂದಾಗಿ ಜನರು ಆಹಾರವನ್ನು ಜಗಿಯುವುದಿಲ್ಲ. ಬಾಯಿಗೆ ಹಾಕಿ ಜಗಿಯದೇ ನುಂಗಿ ಬಿಡ್ತಾರೆ. ಇದು ಜೀರ್ಣಕ್ರಿಯೆಯನ್ನು ನಿಧಾನ ಮಾಡುತ್ತದೆ. ಹೊಟ್ಟೆಯಲ್ಲಿ ಗ್ಯಾಸ್ ಉತ್ಪತ್ತಿಯಾಗುತ್ತದೆ. ಪ್ರತಿ ಬಾರಿ ಆಹಾರ ಸೇವನೆ ಮಾಡುವಾಗಲು ನಿಧಾನವಾಗಿ ಜಗಿದು ನುಂಗಿ.