ತಂದೆಯಾಗುವ ಆಸೆ ಇದೆ. ಆದರೆ ಅದು ಸಾಧ್ಯವಾಗ್ತಾ ಇಲ್ಲ ಎನ್ನುವ ಪುರುಷ+ರು ಇದನ್ನು ಓದಲೇಬೇಕು. ಅಧ್ಯಯನವೊಂದು ತಂದೆಯಾಗಲು ಯಾವ ರೀತಿ ಮಲಗಬೇಕು ಎನ್ನುವ ಬಗ್ಗೆ ಸಂಶೋಧನೆ ನಡೆಸಿದೆ.
ಅಧ್ಯಯನದ ಪ್ರಕಾರ ಬಟ್ಟೆ ಇಲ್ಲದೆ ಅಥವಾ ಸಡಿಲ ಒಳ ಉಡುಪು ಧರಿಸಿ ರಾತ್ರಿ ನಿದ್ದೆ ಮಾಡಬೇಕಂತೆ. ಹಾಗೆ ಮಲಗುವುದರಿಂದ ಶೇಕಡಾ 25 ರಷ್ಟು ವೀರ್ಯ ಹಾಳಾಗುವುದು ತಪ್ಪುತ್ತದೆ. ಜನನಾಂಗಕ್ಕೆ ಹೋಗುವ ತಣ್ಣನೆಯ ಗಾಳಿ ವೀರ್ಯವನ್ನು ರಕ್ಷಿಸುವ ಕೆಲಸ ಮಾಡುತ್ತದೆ ಎಂದು ಅಧ್ಯಯನ ಹೇಳುತ್ತದೆ.
ತಂದೆಯಾಗಲು ಬಯಸಿದ್ದ ಪುರುಷರಿಗೆ ರಾತ್ರಿ ಹಾಗೇ ಮಲಗಲು ಹಾಗೂ ಬೆಳಗ್ಗೆ ಸಡಿಲ ಒಳ ಉಡುಪು ಧರಿಸಲು ಹೇಳಿದ್ದಾರೆ. ಬೆಳಿಗ್ಗೆ ಬಿಗಿಯಾದ ಒಳ ಉಡುಪು ಧರಿಸಿದ್ದವರಿಗಿಂತ ಇವರ ವೀರ್ಯ ಶೇಕಡಾ 25 ರಷ್ಟು ಕಡಿಮೆ ಹಾನಿಗೊಳಗಾಗಿದೆ. ವೀರ್ಯ ಹಾನಿಗೊಳಗಾಗಲು ಉಷ್ಣತೆಯೇ ಕಾರಣ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.