ಮಳೆಯ ಜತೆಗೆ ಹಿಮಗಾಳಿಯೂ ಸೇರಿಕೊಂಡು ತ್ವಚೆಯ ಮೇಲೆ ಪರಿಣಾಮ ಬೀರುತ್ತದೆ. ಇಂಥ ಸಂದರ್ಭದಲ್ಲಿ ನಿಮ್ಮ ತ್ವಚೆಯನ್ನು ಹೇಗೆ ಕಾಪಾಡಿಕೊಳ್ಳಬಹುದು ಗೊತ್ತೇ…?
ಹೊರಗೆ ಮಳೆಯ ಜತೆಗೆ ಒಂದು ರೀತಿಯ ಚಳಿ ಇದೆ. ಇಡೀ ದಿನ ಬಿಸಿನೀರಿನ ಸ್ನಾನ ಮಾಡುತ್ತಾ ಬಾತ್ ರೂಮ್ ನಲ್ಲಿ ದಿನ ಕಳೆಯಲೂ ಸಾಧ್ಯವಿಲ್ಲ. ಸ್ನಾನ ಮುಗಿದ ತಕ್ಷಣ ತ್ವಚೆಯ ಆರ್ದ್ರತೆಯನ್ನು ಕಾಪಾಡುವುದು ಬಹಳ ಮುಖ್ಯ.
ಇಲ್ಲವಾದರೆ ತ್ವಚೆಯಲ್ಲಿ ಬಿರುಕು ಉಂಟಾಗಬಹುದು. ಹಾಗಾಗಿ ಈ ಸಂದರ್ಭದಲ್ಲಿ ಅತಿ ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದೂ ಒಳ್ಳೆಯದಲ್ಲ ಎಂದು ವೈದ್ಯರು ಅಭಿಪ್ರಾಯಪಡುತ್ತಾರೆ.
ತಣ್ಣೀರು ಸ್ನಾನ ಮಾಡಿ ನಿಮಗೆ ಅಭ್ಯಾಸವಿದ್ದರೆ ಅದು ಅತ್ಯುತ್ತಮ ವಿಧಾನ. ಸ್ನಾನದ ಬಳಿಕ ಮಾಯಿಸ್ಚರೈಸರ್ ಹಚ್ಚುವುದನ್ನು ಮರೆಯದಿರಿ. ಇದು ನಿಮ್ಮ ತ್ವಚೆಗೆ ಮೃದುತ್ವವನ್ನು ನೀಡುತ್ತದೆ.
ಸಾಕಷ್ಟು ನೀರು ಕುಡಿಯುವುದು ಬಹಳ ಮುಖ್ಯ. ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾದರೆ ತೊಂದರೆಯಾಗುವ ಸಾಧ್ಯತೆ ಇದೆ. ತ್ವಚೆಯಲ್ಲಿ ಬಿರುಕು ಮೂಡುವ, ಕಾಲಿನ ಹಿಮ್ಮಡಿ ಒಡೆಯುವಂತ ಸಮಸ್ಯೆಗಳು ಕಂಡು ಬಂದಾವು. ಇದನ್ನು ತಡೆಯಲು ವೈದ್ಯರ ಬಳಿ ತೆರಳುವ ಬದಲು ನಿತ್ಯ ಮೂರರಿಂದ ನಾಲ್ಕು ಲೀಟರ್ ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ.