ವೈವಾಹಿಕ ಜೀವನದಲ್ಲಿ ಜಗಳಗಳಾಗುವುದು ಸಹಜ. ಅದನ್ನು ಹೇಗೆ ಪರಿಹರಿಸಿಕೊಳ್ಳುತ್ತೀರಿ ಎಂಬುದರ ಮೇಲೆ ನಿಮ್ಮ ಸಂಬಂಧ ಮತ್ತಷ್ಟು ಗಟ್ಟಿಯಾಗುವುದರ ಗುಟ್ಟು ನಿಂತಿದೆ ಎಂಬುದು ನೆನಪಿರಲಿ.
ಪತ್ರ ಬರೆಯುವುದು ಭಾವನೆಗಳನ್ನು ಹೇಳಿಕೊಳ್ಳಲು ಅನುಸರಿಸಬಹುದಾದ ಅತ್ಯುತ್ತಮ ವಿಧಾನ. ಇದು ಸಮಾಧಾನ ನೀಡುವಂತಿರಲಿ, ಜಗಳವನ್ನು ದೂರ ಮಾಡಲಿ.
ಮೌನವಾಗಿದ್ದು ಸಂಗಾತಿಗೆ ಬುದ್ಧಿ ಕಲಿಸುತ್ತೇನೆ ಎಂದುಕೊಂಡಿದ್ದರೆ ಅದು ದೊಡ್ಡ ತಪ್ಪು, ಏನೇ ಇದ್ದರು ಮಾತನಾಡಿ ಬಗೆಹರಿಯಬೇಕೇ ಹೊರತು ಮೌನದಿಂದಲ್ಲ.
ದಂಪತಿಗಳ ಮಧ್ಯೆ ಮೂರನೆಯ ವ್ಯಕ್ತಿಯ ಆಗಮನಕ್ಕೆ ಅವಕಾಶ ಕೊಡದಿರಿ. ಅದು ಆತ್ಮೀಯ ಗೆಳೆಯನಾಗಿರಲಿ, ಅಪ್ಪ – ಅಮ್ಮನೇ ಆಗಿರಲಿ, ನಿಮ್ಮ ಸಂಬಂಧದ ಗುಟ್ಟು ಹಾಗೂ ಜುಟ್ಟು ನಿಮ್ಮ ಕೈಯಲ್ಲೇ ಇರಲಿ.
ಅವರಿಗಿಷ್ಟವಾಗುವ ಉಡುಗೊರೆಗಳನ್ನು ಕಳುಹಿಸಿಕೊಡುವ ಮೂಲಕ ನಿಮ್ಮ ಸಂಗಾತಿಗೆ ಸರ್ಪೈಸ್ ನೀಡಿ. ಹೂವು, ಚಾಕೊಲೇಟ್ ಗಳು ಎಂಥವರ ಮೂಡ್ ಅನ್ನೂ ಸರಿಪಡಿಸುತ್ತದೆ ಎಂಬುದು ನೆನಪಿಟ್ಟುಕೊಳ್ಳಿ.