ಬಾಗಲಕೋಟೆ: ಟೈಯರ್ ಸ್ಪೋಟಗೊಂಡು ಟಿಪ್ಪರ್ ಲಾರಿ ಪಲ್ಟಿಯಾಗಿ ಒಂದೇ ಕುಟುಂಬದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಪತಿ ಅಂಕಪ್ಪ ತೋಳಮಟ್ಟಿ(70), ಪತ್ನಿ ಯಲ್ಲಮ್ಮ(65), ಮಗ ಪುಂಡಲಿಕ ಯಂಕಪ್ಪ ತೋಳಮಟ್ಟಿ(35), ಮಗಳು ನಾಗವ್ವ(45), ಅಳಿಯ ಅಶೋಕ(50) ಮೃತಪಟ್ಟವರು ಎಂದು ಹೇಳಲಾಗಿದೆ.
ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಹೊನ್ಯಾಳ ಗ್ರಾಮದ ಬಳಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೊಲದ ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದವರ ಮೇಲೆ ಲಾರಿಯ ಮುಂದಿನ ಟೈಯರ್ ಸ್ಪೋಟಗೊಂಡು ಪಲ್ಟಿಯಾಗಿದೆ. ಮೃತರು ಬಾದರದಿನ್ನಿ ಗ್ರಾಮದ ನಿವಾಸಿಗಳಾಗಿದ್ದಾರೆ.