ಮುದ್ದಾದ ಪ್ರಾಣಿಗಳ ವಿಡಿಯೋಗಳನ್ನು ನೋಡಲು ಅನೇಕರು ಇಷ್ಟಪಡುತ್ತಾರೆ. ಅವುಗಳಲ್ಲೂ ಈ ನಾಯಿಮರಿಗಳ ತುಂಟಾಟ ಕಂಡ್ರೆ ಅಬ್ಬಬ್ಬಾ.. ಅನ್ನೋ ಹಾಗಿರುತ್ತದೆ. ನಾಯಿಮರಿಗಳು ಏನು ಮಾಡಿದ್ರೂ ಚೆನ್ನಾಗಿಯೇ ಕಾಣುತ್ತದೆ. ಥೈಲ್ಯಾಂಡ್ ನಲ್ಲಿ ನಾಯಿಮರಿಯೊಂದು ತನ್ನ ಆಹಾರ ಸೇವಿಸುವಾಗ ನಿದ್ರಿಸುವ ವಿಡಿಯೋ ಸದ್ಯ ವೈರಲ್ ಆಗಿದೆ.
ಈ ಮುದ್ದು ನಾಯಿಮರಿಯು ತನ್ನ ಆಹಾರ ತಿನ್ನುತ್ತಿರುವಾಗ ಮಧ್ಯೆ ದಣಿದಂತೆ ಕಂಡುಬರುತ್ತದೆ. ಆಹಾರ ತಿನ್ನುತ್ತಿದ್ದಂತೆ ತನ್ನ ಬಟ್ಟಲಿನಲ್ಲಿ ತಲೆಯಿಟ್ಟು ಹಾಗೆಯೇ ನಿದ್ದೆ ಹೋಗಿದೆ. ಮನುಷ್ಯರು ನಿದ್ದೆ ಮಾಡುವಾಗ ಸಣ್ಣ ಗೊರಕೆ ಹಾಕಿದಂತೆ ಮುದ್ದಾದ ನಾಯಿಮರಿಯು ನಿಶ್ಚಲವಾಗಿ ಮಲಗಿರುವ ದೃಶ್ಯ ಕಂಡರೆ ಎಂಥಾ ಕಲ್ಲು ಮನಸ್ಸು ಕೂಡ ಕರಗಬಲ್ಲದು.
ಸೈಕಲ್ ಏರಿ ಫುಡ್ ಡೆಲಿವರಿ ಮಾಡ್ತಿದ್ದಾರೆ ಅಫ್ಘಾನಿಸ್ತಾನದ ಮಾಜಿ ಸಚಿವ…!
ನಿಮಗೇನಾದರೂ ಬೇಜಾರಾದ್ರೆ ಅಥವಾ ಕೋಪ ಬಂದ್ರೆ ಈ ವಿಡಿಯೋ ನೋಡಿ.. ಈ ಮುದ್ದು ನಾಯಿಮರಿಯ ವಿಡಿಯೋ ನೋಡಿದ್ರೆ ಮನಸ್ಸು ಹಗುರವಾಗಹುದು.