ವಿಶ್ವದ ಅನೇಕ ಜನರು ಡೇಟಿಂಗ್ ಅಪ್ಲಿಕೇಶನ್‌ಗಳನ್ನು ಬಳಸುತ್ತಾರೆ. ಕುಟುಂಬದ ಸದಸ್ಯರಿಗೆ ಈ ವಿಷ್ಯ ಗೊತ್ತಾದ್ರೆ ಎಂಬ ಭಯವಿರುತ್ತದೆ. ಆದ್ರೆ ಇನ್ಮುಂದೆ ಈ ಚಿಂತೆ ಬೇಡ. ಟಿಂಡರ್ ಅಪ್ಲಿಕೇಷನ್ ವೈಶಿಷ್ಟ್ಯವೊಂದನ್ನು ಪ್ರಾರಂಭಿಸಿದೆ. ಇದರ ಸಹಾಯದಿಂದ ಈ ಡೇಟಿಂಗ್ ಅಪ್ಲಿಕೇಶನ್‌ನಲ್ಲಿ ಸ್ನೇಹಿತರು, ಸಂಬಂಧಿಕರು, ಪರಿಚಯಸ್ಥರು ಕಾಣಿಸುವುದಿಲ್ಲ. ಟಿಂಡರ್ ಅಪ್ಲಿಕೇಷನ್ ಬಳಕೆದಾರರು ಕಾಂಟೆಕ್ಟನ್ನು ಬ್ಲಾಕ್ ಮಾಡಬಹುದು.
ಟಿಂಡರ್ ನಲ್ಲಿ ಜನರ ವೈಯಕ್ತಿಕ ಮಾಹಿತಿಗಳನ್ನು ಗೌಪ್ಯವಾಗಿಡಲಾಗುತ್ತದೆ. ಈ ಹಿಂದೆ ಈ ಅಪ್ಲಿಕೇಷನ್ ನಲ್ಲಿ ಸಂಬಂಧಿಕರು, ಸ್ನೇಹಿತರು,ಕುಟುಂಬಸ್ಥರು ಸಿಗ್ತಿದ್ದರು. ಮುಂದಿನ ಕ್ಷಣದಲ್ಲಿ ಯಾರನ್ನು ನಾವು ಭೇಟಿ ಮಾಡ್ತೆವೆಂಬುದು ನಮಗೆ ತಿಳಿದಿರುವುದಿಲ್ಲ. ಸಂಬಂಧಿಕರು, ಸ್ನೇಹಿತರು ಟಿಂಡರ್ ಅಪ್ಲಿಕೇಷನ್ ನಲ್ಲಿ ನಮ್ಮನ್ನು ನೋಡಿದ್ರೆ ಮುಜುಗರವಾಗುವುದು ಸಾಮಾನ್ಯ. ಆದ್ರೆ ಇನ್ಮುಂದೆ ಈ ಸಮಸ್ಯೆ ಬರುವುದಿಲ್ಲ.
ಟಿಂಡರ್ ಬ್ಲಾಕ್ ಕಾಂಟೆಕ್ಟ್ ವೈಶಿಷ್ಟ್ಯದಲ್ಲಿ ಫೋನ್ ನಲ್ಲಿ ಸೇವ್ ಆಗಿರುವ ಕಾಂಟೆಕ್ಟ್ ಗಳನ್ನು ಬ್ಲಾಕ್ ಮಾಡಬಹುದು. ನಿಮಗೆ ಬೇಡದ ನಂಬರ್ ಬ್ಲಾಕ್ ಮಾಡಬಹುದು. ನಿಮ್ಮ ಮೊಬೈಲ್ ನಲ್ಲಿರುವ ಕಾಂಟೆಕ್ಟ್ ಲಿಸ್ಟನ್ನು ನೀವು ಟಿಂಡರ್ ಜೊತೆ ಲಿಂಕ್ ಮಾಡಿ ಬ್ಲಾಕ್ ಮಾಡಬೇಕು. ಆಗ ನೀವು ಬ್ಲಾಕ್ ಮಾಡಿದ ನಂಬರ್ ಟಿಂಡರ್ ನಲ್ಲಿ ಕಾಣಿಸುವುದಿಲ್ಲ.