ಕ್ಯಾಲಿಫೋರ್ನಿಯಾದಲ್ಲಿ ಭಾರಿ ಪ್ರಮಾಣದ ಭೂಕುಸಿತ ಉಂಟಾಗಿದ್ದು, ಇದರ ದೃಶ್ಯಗಳು ವೈರಲ್ ಆಗಿವೆ. ಕಳೆದ ವಾರ ಕ್ಯಾಲಿಫೋರ್ನಿಯಾದ ಸ್ಯಾನ್ ಬರ್ನಾರ್ಡಿನೊ ಪಬ್ಲಿಕ್ ವರ್ಕ್ಸ್ ಈ ವೈರಲ್ ದೃಶ್ಯಗಳನ್ನು ಬಿಡುಗಡೆ ಮಾಡಿದೆ. ಸೆಪ್ಟೆಂಬರ್ 12 ರಂದು ಸಂಭವಿಸಿದ ಈ ಭೂಕುಸಿತದಲ್ಲಿ ಒಂದು ಗಂಟೆಯೊಳಗೆ ಮಣ್ಣು ಮತ್ತು ಅವಶೇಷಗಳಿಂದ ಆವೃತವಾಗಿದ್ದವು. ಇದರ ಭಯಾನಕ ವಿಡಿಯೋ ಇದಾಗಿದೆ.
ಮಣ್ಣಿನ ಕುಸಿತದ ಸಮಯದಲ್ಲಿ, ಲಾಸ್ ಏಂಜಲೀಸ್ ಟೈಮ್ಸ್ ಫಾರೆಸ್ಟ್ ಫಾಲ್ಸ್‌ನಲ್ಲಿ ಮಹಿಳೆಯೊಬ್ಬರು ಸಿಲುಕಿ ಮೃತಪಟ್ಟಿದ್ದಾರೆ. ಇದೇ ಸಮಯದಲ್ಲಿ ಅವರು ಮನೆಯ ಹೊರಗೆ ಗುಡಿಸಲು ಬಂದಿದ್ದರು. ಭೂಕುಸಿತ ಉಂಟಾಗಿ ಪ್ರವಾಹದಲ್ಲಿ ಅವರು ಕೊಚ್ಚಿ ಹೋಗಿದ್ದಾರೆ. ಈ ಭೂಕುಸಿತದಿಂದ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಆಸ್ತಿಪಾಸ್ತಿಗೆ ನಷ್ಟವಾಗಿದೆ.
ಸ್ಯಾನ್ ಬರ್ನಾರ್ಡಿನೊ ಪರ್ವತಗಳ ತಪ್ಪಲಿನಲ್ಲಿ ವಾಸಿಸುತ್ತಿರುವ ನಿವಾಸಿಗಳನ್ನು ಸ್ಥಳಾಂತರ ಮಾಡಲಾಗಿದೆ. ಘಟನೆಯ ಒಂದು ತಿಂಗಳ ನಂತರ, ಈ ವಿಡಿಯೋ ಇದೀಗ ವೈರಲ್ ಆಗಿದೆ. ಮಣ್ಣಿನ ಕುಸಿತದಿಂದ ಉಂಟಾದ ಹಾನಿಯಿಂದ ಹೇಗೆ ಚೇತರಿಸಿಕೊಳ್ಳುವುದು ಎಂಬುದರ ಕುರಿತು ಇಲ್ಲಿ ದೊಡ್ಡಮಟ್ಟದ ಚರ್ಚೆ ನಡೆಯುತ್ತಿದೆ. ಇದರ ಜತೆಗೆ ಮುಂದೆ ಇಂತಹ ಘಟನೆ ನಡೆಯದಂತೆ ತಡೆಯುವುದು ಹೇಗೆ ಎಂಬ ಬಗ್ಗೆಯೂ ಗಮನ ಹರಿಸಲಾಗಿದೆ.