ಪ್ರಪಂಚದಲ್ಲಿ ಪ್ರಳಯ ಆಗಿಹೋಗಿ ಮಾನವರೆಲ್ಲಾ ಸತ್ತುಹೋಗುತ್ತಾರೆ ಎಂಬ ಮಾಧ್ಯಮ ಸೃಷ್ಟಿತ ಭಯಗಳನ್ನು ಬಹಳಷ್ಟು ಬಾರಿ ಎದುರಿಸಿಕೊಂಡು ಬಂದೇ ನಾವು ಈ ಸುದ್ದಿಯನ್ನು ಬರೆಯುತ್ತಿದ್ದೇವೆ; ನೀವೂ ಈ ಸುದ್ದಿಯನ್ನು ಓದುತ್ತಿದ್ದೀರಿ ಅಲ್ಲವೇ?
ಇದೀಗ ಇಂಥದ್ದೇ ಮತ್ತೊಂದು ’ಅಂತ್ಯವೊಂದು’ ಜಗತ್ತಿಗೆ ಬರಲಿದೆ ಎಂಬ ವದಂತಿಗಳು ಸದ್ದು ಮಾಡುತ್ತಿವೆ. 2027ರಲ್ಲಿ, ಇಲ್ಲಿಂದ ನಾಲ್ಕು ವರ್ಷ ಮುಂದಕ್ಕೆ, ಮಾನವನ ಬದುಕೆಂಬುದೇ ಇರುವುದಿಲ್ಲ ಎಂದು ಸಮಯ ಪಯಣಿಗರು ಅಭಿಪ್ರಾಯ ಪಟ್ಟಿದ್ದಾರೆ.
ಮಾರಿಯಾ ಹೆಸರಿನ ಟಿಕ್ಟಾಕ್ ಬಳಕೆದಾರರೊಬ್ಬರು ಶೇರ್ ಮಾಡಿರುವ ವಿಡಿಯೋ ತುಣುಕೊಂದರಲ್ಲಿ 2027ರಲ್ಲಿ ಸೃಷ್ಟಿಯಾಗಲಿದೆ ಎನ್ನಲಾಗುವ ಮರುಭೂಮಿಯ ಕಾಲ್ಪನಿಕ ಚಿತ್ರ ನೀಡಲಾಗಿದೆ.
“ಸಮಯ ಎನ್ನುವುದು ಒಂದು ಭ್ರಮೆ, ನಾನೊಬ್ಬಳೇ ಈಗ ಉಳಿದಿರೋದು,” ಎಂದು ಕ್ಯಾಪ್ಷನ್ ಇರುವ ಈ ಪೋಸ್ಟ್ ಒಂದು ನೆಟ್ಟಿಗರಿಂದ ಭಾರೀ ಚರ್ಚೆಗೆ ಗ್ರಾಸವಾಗಿದೆ.