ನ್ಯೂಯಾರ್ಕ್: ಲ್ಯಾಂಡ್ಲೈನ್ನಿಂದ ಸ್ಮಾರ್ಟ್ಫೋನ್ ವರೆಗೆ ಕೆಲವೇ ದಶಕಗಳಲ್ಲಿ ಆಗಿರುವ ಬದಲಾವಣೆ ಅಷ್ಟಿಷ್ಟಲ್ಲ. ಆದರೆ 30 ರ ದಶಕದಲ್ಲಿ ಮಹಿಳೆಯೊಬ್ಬರು ವೈರ್‌ಲೆಸ್ ಫೋನ್ ಬಳಸಿದ್ದರಾ ಎನ್ನುವ ಪ್ರಶ್ನೆ ಈಗ ಕಾಡುತ್ತಿದೆ. ಇದಕ್ಕೆ ಕಾರಣ ವೈರಲ್ ಆಗುತ್ತಿರುವ ಫೋಟೋ.
1938 ರ ಫೋಟೋ ಒಂದನ್ನು ಯುನಿಲಾಡ್‌ನ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಹಂಚಿಕೊಳ್ಳಲಾಗಿದೆ. ಮಹಿಳೆ, ವಿಂಟೇಜ್ ಮೇಳದಲ್ಲಿ, ತನ್ನ ಕಿವಿಗೆ ಫೋನ್‌ನಂತೆ ಕಾಣುವ ವಸ್ತು ಹಿಡಿದುಕೊಂಡಿದ್ದು ಗುಂಪಿನ ನಡುವೆ ನಡೆಯುತ್ತಿರುವುದು ಕಂಡುಬರುತ್ತದೆ. ಕೆಲ ಹೊತ್ತಿನ ಬಳಿಕ ಅದನ್ನು ಆಕೆ ಕೆಳಗೆ ಹಾಕುವುದು ಕೂಡ ಫೋಟೋದಲ್ಲಿ ಕಂಡುಬಂದಿದೆ.
ಈ ಫೋಟೋ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈಕೆ ಹಿಡಿದಿರುವುದು ನಿಜವಾಗಿಯೂ ಫೋನ್ ಹೌದೋ ಅಲ್ಲವೋ ಎಂಬ ಬಗೆಗಿನ ಚರ್ಚೆ ಇದು. ಕೆಲವರು ಇದನ್ನು ವಾಕಿ ಟಾಕಿ ಎನ್ನುತ್ತಿದ್ದರೆ, ಆ ಸಮಯದಲ್ಲಿ ನೆಟ್ವರ್ಕ್ ಪೂರೈಸುತ್ತಿದ್ದವರು ಯಾರು ಎಂಬ ಪ್ರಶ್ನೆಯನ್ನು ಇನ್ನು ಕೆಲವರು ಹಾಕಿದ್ದಾರೆ.
ಇದು ಫೋನ್ ಅಲ್ಲ, ಬದಲಿಗೆ ಆಕೆಯ ಕ್ಲಚ್ ಪರ್ಸ್ ಎಂದು ಕೆಲವರು ಹೇಳುತ್ತಿದ್ದರೆ, ಇದು ಅಂದಿನ ಸಮಯದಲ್ಲಿ ಬಹಳ ಬಳಕೆಯಲ್ಲಿದ್ದ ಲಿಪ್ಸ್ಟಿಕ್ ಹೋಲ್ಡರ್ ಕೇಸ್ ಎಂದು ಇನ್ನು ಕೆಲವರು ಹೇಳುತ್ತಿದ್ದಾರೆ. ಆದರೆ ಈಕೆ ತನ್ನ ಚಿಕ್ಕಮ್ಮ ಎಂದು ಬರೆದುಕೊಂಡಿರುವ ಯೂಟ್ಯೂಬರ್ ಒಬ್ಬರು ತಮ್ಮ ಚಿಕ್ಕಮ್ಮ ಡುಪಾಂಟ್ ಕಾರ್ಖಾನೆಯಲ್ಲಿ ದೂರವಾಣಿ ಸಂವಹನ ವಿಭಾಗವನ್ನು ಹೊಂದಿದ್ದರು. ಅವರು ವೈರ್‌ಲೆಸ್ ಟೆಲಿಫೋನ್‌ಗಳನ್ನು ಪ್ರಯೋಗಿಸುತ್ತಿದ್ದರು. ಆಕೆ ಮತ್ತು ಇತರ ಐದು ಮಹಿಳೆಯರಿಗೆ ಒಂದು ವಾರದವರೆಗೆ ಪರೀಕ್ಷಿಸಲು ವೈರ್‌ಲೆಸ್ ಫೋನ್‌ಗಳನ್ನು ನೀಡಲಾಯಿತು ಎಂದಿದ್ದಾರೆ. ಸದ್ಯ ಈದೀಗ ಚರ್ಚೆಯ ವಿಷಯವಾಗಿದೆ.