ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ) ಕುರಿತು ಪಾಕಿಸ್ತಾನದ ನೂತನ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್ ನಾಯಕ ಹರೀಶ್ ರಾವತ್ ಅವರು ಪಿಒಕೆಯನ್ನು ಹಿಂಪಡೆಯಲು ಇದು ಸಕಾಲ ಎಂದು ಹೇಳಿದ್ದಾರೆ.
ಪ್ರಸ್ತುತ ಪಾಕಿಸ್ತಾನ ದುರ್ಬಲ ಸ್ಥಿತಿಯಲ್ಲಿದೆ ಮತ್ತು ನಾವು ಪಾಕಿಸ್ತಾನದಿಂದ ಪಿಒಕೆ ಅನ್ನು ತೆಗೆದುಕೊಳ್ಳುವ ಸಮಯ ಇದಾಗಿದೆ ಎಂದು ಹೇಳಿದರು.
ಪಾಕಿಸ್ತಾನದ ಅಕ್ರಮ ಆಕ್ರಮಣದಿಂದ ಪಿಒಕೆಯನ್ನು ಮುಕ್ತಗೊಳಿಸುವುದು ನಮ್ಮ ಜವಾಬ್ದಾರಿಯಾಗಿದೆ. ನಾವು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಂಸತ್ತಿನಲ್ಲಿ ನಿರ್ಣಯವನ್ನು ಅಂಗೀಕರಿಸಿದ್ದೇವೆ. ಈಗ ಮೋದಿ ಸರ್ಕಾರ ತನ್ನ ಕಾರ್ಯಸೂಚಿಯಲ್ಲಿ ಇದನ್ನು ಸೇರಿಸಬೇಕು. ಈ ಸಮಯದಲ್ಲಿ ಪಾಕಿಸ್ತಾನ ದುರ್ಬಲ ಸ್ಥಿತಿಯಲ್ಲಿ, ನಾವು ಪಾಕಿಸ್ತಾನದಿಂದ ಪಿಒಕೆ ತೆಗೆದುಕೊಳ್ಳುವ ಸೂಕ್ತ ಸಮಯ ಇದು ಎಂದು ಹೇಳಿದ್ದಾರೆ.