ಬೆಂಗಳೂರು : ಇದುವರೆಗೆ 1.22 ಕೋಟಿ ಮಹಿಳೆಯರಿಗೆ 30.285 ಕೋಟಿ ‘ಗೃಹಲಕ್ಷ್ಮಿ’ ಹಣ ಜಮಾ ಮಾಡಲಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.
ಗೃಹಲಕ್ಷ್ಮಿ ಯೋಜನೆಯಡಿ ಆಗಸ್ಟ್ 2023 ರಿಂದ ಈವರೆಗೆ ಪ್ರತಿ ಮನೆಯ ಯಜಮಾನಿಯ ಖಾತೆಗೆ ಮಾಸಿಕ ₹2,000 ದಂತೆ 1.22 ಕೋಟಿ ಮಹಿಳೆಯರಿಗೆ ಒಟ್ಟು 30,285 ಕೋಟಿ ಧನಸಹಾಯ ನೀಡಲಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.
ಆರೋಗ್ಯ ಪುಷ್ಟಿ ಯೋಜನೆಯನ್ನು ಪ್ರಾಯೋಗಿಕವಾಗಿ ರಾಜ್ಯದ 102 ತಾಲೂಕುಗಳಲ್ಲಿ ಜಾರಿಗೊಳಿಸಿದ್ದು, ಅರ್ಹ ವಿವಾಹಿತ ಮಹಿಳೆಯರಿಗೆ ಪೌಷ್ಟಿಕ ಕಿಟ್ ವಿತರಣೆ ಮಾಡಲಾಗಿದೆ. ಮಾಜಿ ದೇವದಾಸಿಯರ ಉತ್ಪನ್ನಗಳ ಮಾರಾಟಕ್ಕಾಗಿ ಸವದತ್ತಿಯಲ್ಲಿ 48 ಮಾರಾಟ ಮಳಿಗೆಗಳ ನಿರ್ಮಾಣ ಮಾಡಲಾಗಿದೆ ಎಂದು ಮಾಹಿತಿ ನೀಡಿದೆ.
ಸ್ತ್ರೀ ಸ್ವಾವಲಂಬನೆಯತ್ತ ದಿಟ್ಟ ಹೆಜ್ಜೆ#GuaranteeSarkar #KarnatakaGovt@CMofKarnataka@siddaramaiah pic.twitter.com/uIJZfE5Dnc
— DIPR Karnataka (@KarnatakaVarthe) November 8, 2024