ಜಿಮ್ ನಲ್ಲಿ ವ್ಯಾಯಾಮ ಮಾಡುತ್ತಿದ್ದ ಬೇರೊಬ್ಬ ಯುವತಿಯ ವಿಡಿಯೋವನ್ನು ಕದ್ದು ರೆಕಾರ್ಡ್ ಮಾಡುತ್ತಿದ್ದ ಕಾಮುಕನೊಬ್ಬನನ್ನು ಜಿಮ್‌ಗೆ ಬಾರದಂತೆ ಬ್ಯಾನ್ ಮಾಡಿಸಿದ ಮಹಿಳೆಯೊಬ್ಬರಿಗೆ ಶ್ಲಾಘನೆ ವ್ಯಕ್ತವಾಗಿದೆ.
ತನ್ನ ಫೋನ್ ಮೂಲಕ ಜಿಮ್‌ನಲ್ಲಿ ಕಸರತ್ತು ಮಾಡುತ್ತಿದ್ದ ಯುವತಿಯೊಬ್ಬರ ವಿಡಿಯೋ ಚಿತ್ರೀಕರಿಸುತ್ತಿದ್ದಿದ್ದನ್ನು ಕಂಡ ಈಕೆ, ಕೂಡಲೇ ಇದನ್ನು ಬಹಿರಂಗ ಮಾಡಲು ಮುಂದಾಗಿದ್ದಾರೆ.
ಟಿಕ್‌ಟಾಕ್‌ನಲ್ಲಿ ಎರಡು ದಶಲಕ್ಷಕ್ಕೂ ಹೆಚ್ಚಿನ ವೀವ್ಸ್ ಪಡೆದ ಈ ವಿಡಿಯೋದಲ್ಲಿ ಆ ವ್ಯಕ್ತಿಯ ಫೋನ್ ಸ್ಕ್ರೀನ್ ಅನ್ನು ತೋರಲಾಗಿದೆ. ತನ್ನಿಂದ ಕೆಲವೇ ಅಡಿಗಳ ದೂರದಲ್ಲಿ ವ್ಯಾಯಾಮ ಮಾಡುತ್ತಿದ್ದ ಯುವತಿಯ ವಿಡಿಯೋ ರೆಕಾರ್ಡ್ ಮಾಡಲು ಆರಂಭಿಸಿದ್ದಾನೆ ಈ ಪುಂಡ.
ಕಿವಿಗೆ ಒಪ್ಪುವಂತಿರಲಿ ನೀವು ಖರೀದಿಸುವ ಕಿವಿಯೋಲೆ
“ಹೆಂಗಸರೇ, ನಾವು ಪರಸ್ಪರರ ಕಾಳಜಿ ಮಾಡಿಕೊಳ್ಳಬೇಕು. ನಾನು ಆ ಹುಡುಗಿಗೆ ವಿಚಾರ ತಿಳಿಸಿದ ಸಿಬ್ಬಂದಿಯ ಗಮನಕ್ಕೆ ತಂದಿರುವೆ” ಎಂದು ವಿಡಿಯೋ ಅಪ್ಲೋಡ್ ಮಾಡಿದ @anneli.k8 ಎಂಬಾಕೆ ತಿಳಿಸಿದ್ದಾರೆ.