
ಟಿಂಡರ್ನಲ್ಲಿ ಸಂಗಾತಿಗಾಗಿ ಹುಡುಕಾಟ ನಡೆಸುತ್ತಿದ್ದ ವ್ಯಕ್ತಿಯೊಬ್ಬ ಈ ಬಾರಿ ಯಾರಾದರೂ ಒಲಿಂಪಿಕ್ ಆಟಗಾರ್ತಿ ಜೊತೆ ಡೇಟ್ ಮಾಡಬೇಕೆಂದು ಆಸೆ ಹೊಂದಿದ್ದರಂತೆ.
ಹೀಗಾಗಿ ಈ ವ್ಯಕ್ತಿ ಟಿಂಡರ್ ಆ್ಯಪ್ನಲ್ಲಿ ತಾವಿರುವ ಸ್ಥಳವನ್ನ ಒಲಿಂಪಿಕ್ ಕ್ರೀಡಾಗ್ರಾಮ ಎಂದು ತೋರಿಸಿದ್ದಾರೆ. ಟಿಂಡರ್ನಲ್ಲಿ ಆಟಗಾತಿಗಾಗಿ ತಾವು ಹುಡುಕಾಡಿದ್ದರ ಬಗ್ಗೆ ಸಂಪೂರ್ಣ ವಿವರಣೆಯನ್ನ ಅವರು ಟಿಕ್ಟಾಕ್ನಲ್ಲಿ ಶೇರ್ ಮಾಡಿದ್ದಾರೆ.
ಕಳೆದ ರಾತ್ರಿ ನಾನು ಟಿಂಡರ್ನಲ್ಲಿ ನಾನಿರುವ ಸ್ಥಳವನ್ನ ಒಲಿಂಪಿಕ್ ಕ್ರೀಡಾಗ್ರಾಮವೆಂದು ತೋರಿಸಿದೆ. ಈ ರೀತಿ ಮಾಡಿದ್ರೆ ನನಗೆ ಯಾರಾದರೂ ಒಲಿಂಪಿಕ್ ಆಟಗಾರ್ತಿಯರು ಸಂಗಾತಿಯಾಗಿ ಸಿಗಬಹುದು ಎಂಬ ಅಭಿಲಾಷೆ ನನ್ನದಾಗಿತ್ತು ಎಂದು ರೀಡ್ ಕವ್ನರ್ ಹೇಳಿದ್ದಾರೆ.
ಅಂದಹಾಗೆ ರೀಡ್ ಮಾಡಿದ ಈ ಪ್ಲಾನ್ ನಿಜಕ್ಕೂ ವರ್ಕ್ ಆಗಿದೆ. ಟಿಂಡರ್ನಲ್ಲಿ ರೀಡ್ಗೆ ಕೆನಡಾದ ಈಜುಪಟು ಕ್ಯಾಟರಿನ್ ಸಾವರ್ಡ್ ಸೇರಿದಂತೆ ಅನೇಕರು ಕಂಡಿದ್ದಾರೆ. ಟಿಕ್ಟಾಕ್ನಲ್ಲಿ ರೀಡ್ರ ಈ ವಿಡಿಯೋಗೆ ಸ್ವತಃ ಕ್ಯಾಟರಿನ್ ಕಮೆಂಟ್ ಮಾಡಿದ್ದಾರೆ. ಈ ವಿಡಿಯೋ ಟ್ವಿಟರ್ನಲ್ಲಿ 2ಮಿಲಿಯನ್ ಹಾಗೂ 4 ಮಿಲಿಯನ್ ವೀವ್ಸ್ ಸಂಪಾದಿಸಿದೆ