alex Certify ಖಾಸಗಿ ಕಾರ್ಯಕ್ರಮದಲ್ಲಿ ಸರ್ವಿಸ್ ಗನ್ ಹಿಡಿದು ಜೈಲರ್ ನೃತ್ಯ; ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಖಾಸಗಿ ಕಾರ್ಯಕ್ರಮದಲ್ಲಿ ಸರ್ವಿಸ್ ಗನ್ ಹಿಡಿದು ಜೈಲರ್ ನೃತ್ಯ; ವಿಡಿಯೋ ವೈರಲ್

ದೆಹಲಿಯ ತಿಹಾರ್ ಜೈಲಿನ ಜೈಲರ್ ದೀಪಕ್ ಶರ್ಮಾ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವಿವಾದವನ್ನು ಹುಟ್ಟುಹಾಕಿದೆ.

ವೀಡಿಯೊದಲ್ಲಿ ಅವರು ಸಂಜಯ್ ದತ್ ಅವರ ಚಲನಚಿತ್ರ ಖಲ್ ನಾಯಕ್‌ನ ಪ್ರಸಿದ್ಧ ಹಾಡು “ಖಲ್ ನಾಯಕ್ ಹೂನ್ ಮೇ” ಗೆ ನೃತ್ಯ ಮಾಡುವಾಗ ಪಿಸ್ತೂಲ್ ಅನ್ನು ಕೈಯಲ್ಲಿ ಹಿಡಿದಿರುವುದನ್ನು ಕಾಣಬಹುದು.

ವರದಿಗಳ ಪ್ರಕಾರ ಗುರುವಾರ ಘೋಂಡಾದ ಬಿಜೆಪಿ ಕೌನ್ಸಿಲರ್‌ನ ಪತಿ ಹುಟ್ಟುಹಬ್ಬದ ಪಾರ್ಟಿಯ ಸಂದರ್ಭದಲ್ಲಿ ವೀಡಿಯೊ ರೆಕಾರ್ಡ್ ಮಾಡಿದ್ದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.

ಇಂಟರ್ನೆಟ್ ಬಳಕೆದಾರರು ಈ ವಿಷಯದ ಬಗ್ಗೆ ತನಿಖೆಗೆ ಒತ್ತಾಯಿಸಿದ್ದಾರೆ. ದೀಪಕ್ ಶರ್ಮಾ ಖಾಸಗಿ ಪಾರ್ಟಿಯಲ್ಲಿ ತಮ್ಮ ಬೇಜವಾಬ್ದಾರಿ ವರ್ತನೆಗಾಗಿ ಟೀಕೆಗಳನ್ನು ಎದುರಿಸುತ್ತಿದ್ದಾರೆ.

ತಿಹಾರ್ ಜೈಲಿನ ಜೈಲರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು, “ಸಾಮಾನ್ಯ ವ್ಯಕ್ತಿಯೊಬ್ಬರು ಪಿಸ್ತೂಲ್ ಝಳಪಿಸುತ್ತಾ ಡ್ಯಾನ್ಸ್ ಮಾಡುವುದನ್ನು ವಿಡಿಯೋದಲ್ಲಿ ಕಂಡರೆ, ಪೊಲೀಸರು ಮತ್ತು ಮಾಧ್ಯಮಗಳು ಅವರನ್ನು ತ್ವರಿತವಾಗಿ ಬಂಧಿಸಿ ಜೈಲಿಗಟ್ಟುತ್ತವೆ. ಆದರೆ, ಇವರು ದೆಹಲಿಯ ತಿಹಾರ್ ಜೈಲಿನ ಜೈಲರ್ ದೀಪಕ್ ಶರ್ಮಾ. ಅವರ ಸರ್ವೀಸ್ ಪಿಸ್ತೂಲ್ ತಿರುಗಿಸುತ್ತಿರುವುದನ್ನು ಕಂಡ ಈ ಪ್ರಕರಣದಲ್ಲಿ ಯಾರಾದರೂ ಯಾವುದೇ ಕ್ರಮ ಕೈಗೊಳ್ಳುತ್ತಾರೆಯೇ? ” ಎಂದು ಪ್ರಶ್ನಿಸಿದ್ದಾರೆ.

ಪ್ರಸ್ತುತ ದೆಹಲಿಯ ತಿಹಾರ್ ಜೈಲಿನಲ್ಲಿ ಸಹಾಯಕ ಸೂಪರಿಂಟೆಂಡೆಂಟ್ ಆಗಿ ಸೇವೆ ಸಲ್ಲಿಸುತ್ತಿರುವ ದೀಪಕ್ ಶರ್ಮಾ ಅವರು ಫಿಟ್‌ನೆಸ್ ಉತ್ಸಾಹಿಯಾಗಿದ್ದು, ಇನ್ ಸ್ಟಾಗ್ರಾಂನಲ್ಲಿ 4.4 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಕಳೆದ ವರ್ಷ ಆಗಸ್ಟ್ ನಲ್ಲಿ ಮಹಿಳೆಯೊಬ್ಬರು ದೀಪಕ್ ಶರ್ಮಾಗೆ 50 ಲಕ್ಷ ರೂ. ವಂಚಿಸಿದ ಆರೋಪದ ಬಳಿಕ ಅವರು ಸುದ್ದಿಯಾಗಿದ್ದರು.

ವರದಿಗಳ ಪ್ರಕಾರ ಮಹಿಳೆ ಮತ್ತು ಆಕೆಯ ಪತಿ ತಮ್ಮ ಆರೋಗ್ಯ ಉತ್ಪನ್ನ ಬ್ರಾಂಡ್‌ನಲ್ಲಿ ಹೂಡಿಕೆ ಮಾಡಲು ಶರ್ಮಾ ಅವರನ್ನು ಸಂಪರ್ಕಿಸಿದ್ದರು. ಬುಸಿನೆಸ್ ಬೆನಿಫಿಟ್ ನೀಡುವ ಭರವಸೆಯೊಂದಿಗೆ ಬ್ರಾಂಡ್ ಅಂಬಾಸಿಡರ್ ಆಗಿ ತಮ್ಮನ್ನು ಮಾಡಲಾಗುತ್ತದೆ ಎಂದಿದ್ದರಂತೆ. ಅದಕ್ಕೆ ಒಪ್ಪಿ ಹಣವನ್ನು ವರ್ಗಾಯಿಸಿದ ನಂತರ ಮಹಿಳೆ ಮತ್ತು ಆಕೆಯ ಪತಿ ನಾಪತ್ತೆಯಾಗಿದ್ದಾರೆ ಎಂದು ಶರ್ಮಾ, ಅವರ ವಿರುದ್ಧ ದೂರು ದಾಖಲಿಸಿದ್ದರು.

— राहुल गाज़ियाबाद (@RahulGhaziabad_) August 9, 2024

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...