ಪ್ರಾಣಿಗಳು ಜಿಂಕೆ ಸೇರಿದಂತೆ ವಿವಿಧ ಪ್ರಾಣಿಗಳನ್ನು ಬೇಟೆಯಾಡೋದನ್ನ ಡಿಸ್ಕವರಿ, ಅನಿಮಲ್ ಪ್ಲಾನೆಟ್ನಂತಹ ಚಾನೆಲ್ನಲ್ಲಿ ನೋಡಿರುತ್ತೇವೆ. ಆದರೆ ಮಧ್ಯಪ್ರದೇಶದ ಕನ್ಹಾ ಹುಲಿ ಮೀಸಲು ಪ್ರದೇಶದಲ್ಲಿ ಹುಲಿಗಳು ಎಲ್ಲರ ಸಮ್ಮುಖದಲ್ಲೇ ಜಿಂಕೆಯನ್ನು ಬೇಟೆಯಾಡಿ ತಿಂದಿದ್ದು ವ್ಯಾಘ್ರಗಳ ಗಮನಾರ್ಹ ಪ್ರದರ್ಶನ ನೋಡಿದ ಜನರು ದಂಗಾಗಿದ್ದಾರೆ.
ಅತ್ಯಂತ ಶಕ್ತಿಯುತ ದೇಹಗಳನ್ನು ಹೊಂದಿರುವ ಹುಲಿಗಳು ಪರಭಕ್ಷಕ ಜೀವಿಗಳಾಗಿವೆ. ಈ ಹುಲಿಗಳು ಸೇರಿ ಜಿಂಕೆಯನ್ನು ಬೇಟೆಯಾಡೋದ್ರಲ್ಲಿ ಯಶಸ್ವಿಯಾಗಿದ್ದವು. ಹುಲಿಯ ಬೇಟೆಯ ಚಾಕಚಕ್ಯತೆಯ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿಯೂ ಸಖತ್ ವೈರಲ್ ಆಗ್ತಿದೆ.
ಕನ್ಹಾ ಹುಲಿ ಮೀಸಲು ಪ್ರದೇಶವು ಅಭಯಾರಣ್ಯವಾಗಿ ಉಳಿದಿದೆ, ಈ ಕನ್ಹಾ ಅಭಯಾರಣ್ಯದಲ್ಲಿ ನಡೆದ ಈ ಘಟನೆಯ ವಿಡಿಯೋ ಇಂಟರ್ನೆಟ್ನಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಕೆಲವರು ವಿಡಿಯೋ ಮಾಡಿದ ಮಹಿಳೆಯ ದೃಷ್ಟಿಕೋನಕ್ಕೆ ಸಾಥ್ ನೀಡಿದ್ರೆ ಇನ್ನೂ ಕೆಲವರು ಇವುಗಳನ್ನು ಖಾಸಗಿಯಾಗಿ ಇಡುವುದೇ ಸರಿ ಎಂದು ವಾದಿಸಿದ್ದಾರೆ. ಅನೇಕರು ಈ ಘಟನೆಯ ಬಗ್ಗೆ ತಮ್ಮದೇ ಆದ ಅಭಿಪ್ರಾಯಗಳನ್ನು ಕಮೆಂಟ್ ವಿಭಾಗದಲ್ಲಿ ಹೊರಹಾಕಿದ್ದಾರೆ.’