
ಏಕೆಂದರೆ ಪ್ರಾಣಿಗಳು ಏಕಾಏಕಿ ನಡುರಸ್ತೆಗೆ ಬಂದು ಅಪಘಾತಕ್ಕೆ ಕಾರಣವಾಗಬಹುದು. ವಾಹನದಿಂದ ಮಾರಣಾಂತಿಕವಾಗಿ ಹೊಡೆತ ತಿಂದು ಪ್ರಾಣಿಗಳು ಕೂಡ ಸಾವನ್ನಪ್ಪುವ ಸಾಧ್ಯತೆ ಹೆಚ್ಚಿರುತ್ತದೆ. ಇದೀಗ ವೈರಲ್ ಆಗಿರೋ ವಿಡಿಯೋ ಕೂಡ ಇಂಥದ್ದೆ.
ಹೌದು, ಮಲೇಷ್ಯಾದಲ್ಲಿ ವ್ಯಕ್ತಿಯೊಬ್ಬ ಕತ್ತಲ ಹೆದ್ದಾರಿಯಲ್ಲಿ ವಾಹನ ಚಲಾಯಿಸುತ್ತಿದ್ದಾಗ ಮಲಯನ್ ಹುಲಿಯೊಂದು ಎಲ್ಲಿಂದಲೋ ಓಡಿ ಬಂದು, ಕಾರಿಗೆ ಡಿಕ್ಕಿ ಹೊಡೆದಿದೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.
ಕೆಲಾಂಟಾನ್ನಲ್ಲಿ ಹುಲಿ ಇದ್ದಕ್ಕಿದ್ದಂತೆ ರಸ್ತೆಗೆ ಅಡ್ಡಲಾಗಿ ನುಗ್ಗಿದ ಘಟನೆ ನಡೆದಿದೆ. ತುಂಬಾ ಕಗ್ಗತ್ತಲೆ ಇದ್ದುದರಿಂದ ಹಾಗೂ ಏಕಾಏಕಿ ಹುಲಿ ಓಡುತ್ತಾ ನಡುರಸ್ತೆಗೆ ಬಂದಿದ್ದರಿಂದ ಚಾಲಕನಿಗೆ ಕೂಡಲೇ ವಾಹನಕ್ಕೆ ಬ್ರೇಕ್ ಹಾಕಲು ಸಾಧ್ಯವಾಗಲಿಲ್ಲ. ಹೀಗಾಗಿ ಹುಲಿ ಕಾರಿಗೆ ಬಲವಾಗಿ ಡಿಕ್ಕಿ ಹೊಡೆದು ರಸ್ತೆಯ ಇನ್ನೊಂದು ಬದಿಗೆ ಬಿದ್ದಿದೆ. ನಂತರ ಭಯದಲ್ಲಿ ಹುಲಿ ಅಲ್ಲಿಂದ ವೇಗವಾಗಿ ಓಡಿಹೋಗಿದೆ.
ಈ ವಿಡಿಯೋ ಮೊದಲಿಗೆ ಫೇಸ್ಬುಕ್ನಲ್ಲಿ ವೈರಲ್ ಆಗಿತ್ತು. ಆದರೆ ಈಗ ಇತರ ಪ್ಲಾಟ್ಫಾರ್ಮ್ಗಳಲ್ಲಿಯೂ ಹಂಚಿಕೊಳ್ಳಲಾಗುತ್ತಿದ್ದು, ಭಾರಿ ಸದ್ದು ಮಾಡುತ್ತಿದೆ. ಮಲೇಷ್ಯಾದಲ್ಲಿ ಮಲಯನ್ ಹುಲಿಗಳು ಅಳಿವಿನಂಚಿನಲ್ಲಿದೆ. ಹೀಗಾಗಿ ಹುಲಿ ಗಾಯಗೊಂಡಿಲ್ಲ ಎಂದು ಖಚಿತಪಡಿಸಿಕೊಳ್ಳಲು ಹುಲಿಯನ್ನು ಪರಿಶೀಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನೆಟ್ಟಿಗರು ಒತ್ತಾಯಿಸಿದ್ದಾರೆ.