ಹುಲಿ ತನ್ನ ಬೇಟೆಯನ್ನು ನಿರ್ಲಕ್ಷಿಸುವುದರ ಬಗ್ಗೆ ಎಂದಾದರೂ ಕೇಳಿದ್ದೀರಾ? ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಕ್ಲಿಪ್ನಲ್ಲಿ, ಎರಡು ಜಿಂಕೆಗಳು ತನ್ನ ಹಿಂದೆ ನಡೆಯುತ್ತಿರುವಾಗ ಹುಲಿಯೊಂದು ಆಕಸ್ಮಿಕವಾಗಿ ದೂರ ಸರಿಯುವುದನ್ನು ಕಾಣಬಹುದು.
ವಿಡಿಯೋವನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿ ರಮೇಶ್ ಪಾಂಡೆ ಹಂಚಿಕೊಂಡಿದ್ದು, ಈಗಾಗಲೇ 144ಕೆ ವೀಕ್ಷಣೆ ಹೊಂದಿದೆ.
ತನ್ನ ಹಿಂದೆ ಎರಡು ಜಿಂಕೆಗಳು ಇದ್ದಿದ್ದನ್ನು ಗಮನಿಸುವ ಹುಲಿ ಅದನ್ನು ಮೊದಲು ದಿಟ್ಟಿಸಿ ನೋಡಿ ನಂತರ ಮುಂದೆ ಸಾಗಿ ಹೋಗುತ್ತದೆ.
“ಹುಲಿಗಳು ಕೊಲ್ಲುವ ಸಲುವಾಗಿ ಕೊಲ್ಲುವುದಿಲ್ಲ” ಎಂದು ರಮೇಶ್ ಪಾಂಡೆ ಶೀರ್ಷಿಕೆಯ ಜೊತೆ ವಿಡಿಯೋ ಪೋಸ್ಟ್ ಮಾಡಿದ್ದಾರೆ.