ಸೀಟಿಗಾಗಿ ಇಬ್ಬರು ಮಹಿಳೆಯರು ಕಚ್ಚಾಡಿಕೊಂಡ ವಿಡಿಯೋ ಒಂದು ವೈರಲ್ ಆಗಿದೆ. ರೈಲ್ವೆ ಮೇಲಿನ ಬರ್ತ್ ನಲ್ಲಿ ಮಗನ ಜೊತೆ ಮಲಗಿದ್ದ ಮಹಿಳೆಯೊಬ್ಬಳು ಇದು ನನ್ನ ಬರ್ತ್ ಎನ್ನುತ್ತಿದ್ದಾಳೆ. ಆದ್ರೆ ಕೆಳಗೆ ನಿಂತ ಮಹಿಳೆ, ನಾನು ಟಿಕೆಟ್ ಕರ್ನ್ಫರ್ಮ್ ಮಾಡಿದ್ದು ಅಂತಾ ವಾದ ಮಾಡ್ತಿದ್ದಾಳೆ.
ಟ್ವಿಟರ್ ನಲ್ಲಿ ಇವರಿಬ್ಬರ ವಿಡಿಯೋ ವೈರಲ್ ಆಗಿದೆ. ತನ್ನ ಮಗನೊಂದಿಗೆ ಬೆರ್ತ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಮಹಿಳೆಯೊಬ್ಬರು ಟಿಕೆಟ್ ಇಲ್ಲದೆ ಆಸನವನ್ನು ಆಕ್ರಮಿಸಿಕೊಂಡಿದ್ದರು. ಅಷ್ಟರಲ್ಲಿ ಕೆಳಗೆ ನಿಂತಿದ್ದ ಮಹಿಳೆ ತನ್ನ ಹೆಸರಿಗೆ ಸೀಟು ಕಾಯ್ದಿರಿಸಿರುವುದಾಗಿ ಹೇಳಿ ಟಿಕೆಟ್ ಇಲ್ಲದ ಮಹಿಳೆಗೆ ಕೆಳಗೆ ಇಳಿಯುವಂತೆ ಹೇಳ್ತಾಳೆ. ಆದ್ರೆ ಆ ಮಹಿಳೆ ಆರ್‌ಎಸಿ ಅಲ್ಲ, ಕನ್ಫರ್ಮ್ ಬುಕಿಂಗ್ ಎಂದು ವಾದಿಸ್ತಾಳೆ.
ಅಡ್ಜೆಸ್ಟ್ ಮಾಡ್ಕೊಳ್ಳಿ, ಬೇರೆ ಸೀಟಿನಲ್ಲಿ ಕುಳಿತುಕೊಳ್ಳಿ. ನೀವು ಏನೇ ಹೇಳಿದ್ರೂ ನಾನು ಇಳಿಯೋದಿಲ್ಲ. ಟಿಟಿಗೆ ಬೇಕಿದ್ರೆ ಕಾಲ್ ಮಾಡಿ ಅಂತ ಮಹಿಳೆ ಇನ್ನೊಬ್ಬ ಮಹಿಳೆಗೆ ಧಮಕಿ ಹಾಕ್ತಾಳೆ. ಆಗ ಮಹಿಳೆ ತನ್ನ ಪತಿಗೆ ಕರೆ ಮಾಡಿ, ನನ್ನ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದಾಳೆಂದು ಆರೋಪ ಮಾಡ್ತಾಳೆ. ಆಗ ಮೇಲೆ ಮಲಗಿದ್ದ ಮಹಿಳೆ, ನಾನು ಅಡ್ಜೆಸ್ಟ್ ಮಾಡಿಕೊಳ್ಳೋಕೆ ಹೇಳಿದೆ, ಅಸಭ್ಯವಾಗಿ ವರ್ತಿಸಿಲ್ಲ ಎಂದು ವಾದ ಮಾಡ್ತಾಳೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋಕ್ಕೆ ಸಾಕಷ್ಟು ಕಮೆಂಟ್ ಬಂದಿದೆ. ರೈಲ್ವೆ ಇಲಾಖೆ ಟಿಕೆಟ್ ಕಾಯ್ದಿರಿಸುವ ವಿಧಾನವನ್ನು ಅನೇಕರು ಖಂಡಿಸಿದ್ದಾರೆ.