ಕುರಿಗಳ ಹಿಂಡು ಮೇಯುವುದಕ್ಕೆ ಹೋಗಿರುವಾಗ, ಗುಂಪು-ಗುಂಪಾಗಿಯೇ ಹೋಗಿರುತ್ತೆ. ಆದರೆ ಅದೇ ಹಿಂಡಿನಲ್ಲಿರುವ ಕುರಿಗಳು ಗುಂಪಿನಿಂದ ತಪ್ಪಿಸಿಕೊಂಡು ಹೋಗಿಬಿಡುತ್ತೆ. ಅದೇ ರೀತಿ ಗುಂಪಿನಿಂದ ತಪ್ಪಿಕೊಂಡ ಕುರಿಗಾಗಿ ಮಾರ್ಟಿನ್ ಅನ್ನೊ ಯುವತಿ ಮಾಡಿದ ಕೆಲಸ ಏನು ಅಂತ ಗೊತ್ತಾದ್ರೆ ದಂಗಾಗಿ ಬಿಡ್ತಿರಾ..?
ಇಂಗ್ಲೆಂಡ್ನ ಮಾರ್ಟಿನ್ ಪೆಟ್ರೆ, ಬಸ್ ಚಾಲಕಳಾಗಿ ಡ್ಯೂಟಿಗೆ ಸೇರಿದ ಮೊದಲ ದಿನದ ಅನುಭವ ಇದು. ಇಸ್ಟರ್ನ್ ಬಾರ್ನ್ ರೂಟ್ಗೆ ಬಸ್ ಡ್ರೈವ್ ಮಾಡುವ ಕೆಲಸ ಆಕೆಯದ್ದಾಗಿತ್ತು. ಬಸ್ ಹೋಗಿರುವಾಗಲೇ, ಬಸ್ ಎದುರು ಹಿಂಡಿನಿಂದ ತಪ್ಪಿಸಿಕೊಂಡು ಬಂದ, ಕುರಿಯೊಂದು ನಿಂತಿತ್ತು. ಇದರಿಂದ ಆಕೆಯ ಬಸ್ ಮುಂದೆ ಚಲಿಸುವುದು ಅಸಾಧ್ಯವಾಗಿತ್ತು. ಇದರಿಂದಾಗಿ ಟ್ರಾಫಿಕ್ ಜಾಮ್ ಆಗಿತ್ತು.
ರಸ್ತೆ ಮಧ್ಯ ನಿಂತಿರುವ ಕುರಿ ಹೋಗೋದನ್ನೆ, ಅಲ್ಲಿದ್ದವರೆಲ್ಲ ಕಾಯ್ತಿದ್ದರು. ಆದರೆ ಆ ಕುರಿ ಹೋಗುವ ಲಕ್ಷಣವೇ ಕಾಣಿಸಿರಲಿಲ್ಲ. ಬದಲಾಗಿ ಆ ಕುರಿ ಬೇರೆ ವಾಹನಗಳ ಚಕ್ರದಡಿ ಸಿಕ್ಕಾಕಿಕೊಳ್ಳೋ ಸಾಧ್ಯತೆ ಹೆಚ್ಚಾಗಿಚ್ತು. ಅದಕ್ಕೆ ಆಕೆ ತಕ್ಷಣವೇ ಬಸ್ನಿಂದ ಇಳಿದು ಬೇರೆಯವರ ಸಹಾಯದಿಂದ ಆ ಕುರಿಯನ್ನ ಎತ್ತಿಕೊಂಡು ಬಂದು ಬಸ್ ಹತ್ತುತ್ತಾಳೆ. ಅಷ್ಟೆ ಅಲ್ಲ ಆ ಕುರಿಯ ಟಿಕೆಟ್ನ್ನ ಸಹ ತೆಗೆಯುತ್ತಾಳೆ. ಅಷ್ಟಕ್ಕೂ ಆಕೆ ಕಂಡಕ್ಟರ್ ಹತ್ತಿರ ಏನಂತ ಹೇಳಿ ಟಿಕೆಟ್ ತೆಗೆಯುತ್ತಾಳ ಗೊತ್ತಾ..? ‘ದಯಮಾಡಿ ಹೊಲದ ತನಕ ಟಿಕೆಟ್ ಕೊಡಿ’
ಕುರಿಯ ಹಿಂಡಿನಿಂದ ತಪ್ಪಿಸಿಕೊಂಡ ಈ ಕುರಿಯನ್ನ ಹಿಡಿಯುವುದೇ ದೊಡ್ಡ ಸವಾಲಿನ ಕೆಲಸವಾಗಿತ್ತು. ಈ ಕುರಿಯ ಜೊತೆ ಜೊತೆಗೆ ಇನ್ನೂ ಅನೇಕ ಕುರಿಗಳು ಒಂದೇ ಸಮನೆ ಓಡ್ತಾ ಹೋಗಿದ್ದವು. ಆದರೆ ಅದ್ಯಾವುದೂ ನಮ್ಮ ಕೈಗೆ ಸಿಕ್ಕಿಲ್ಲ. ಸಿಕ್ಕ ಇದೊಂದು ಕುರಿಯನ್ನ ಬ್ಯಾಗ್ನ ಬೆಲ್ಟ್ ನಿಂದ ಕಟ್ಟಿ ಹಿಡಿದೇವು. ಕೊನೆಗೆ ಅಲ್ಲೇ ಇದ್ದ ಬೇರೆ ಬೇರೆ ಚಾಲಕರ ಸಹಾಯದಿಂದ ಈ ಕುರಿಯನ್ನ ಬಸ್ ಒಳಗೆ ತಂದಿದ್ದೇವೆ. ಎಂದು ಮಾರ್ಟಿನ್ ಕುರಿ ಹಿಡಿದ ರೀತಿಯನ್ನ ವಿವರಿಸಿದ್ದಾರೆ. ಇವರ ಈ ಅನುಭವವನ್ನ ‘ಬೈಟ್ ಆನ್ ಹೋವ್ ಬಸ್’ನವರು ಟ್ವಿಟ್ಟರ್ನಲ್ಲಿ ಶೇರ್ ಮಾಡಿಕೊಂಡಿದ್ದು, ಇದಕ್ಕೆ ಶಿರ್ಷಿಕೆಯಲ್ಲಿ ‘ದಯಮಾಡಿ ಹೊಲದ ತನಕ ಟಿಕೆಟ್ ಕೊಡಿ ‘ ಎಂದು ಬರೆದಿದ್ದಾರೆ.
ನೆಟ್ಟಿಗರು ಈ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿರುವ ಈ ಪೋಸ್ಟನ್ನ ನ್ನ ಓದಿ ಪಟೆ ಮಾಡಿರುವ ಕೆಲಸಕ್ಕೆ ಮೆಚ್ಚುಗೆಯನ್ನ ಸೂಚಿಸಿದ್ದಾರ.