alex Certify ಥೈರಾಯ್ಡ್ ರೋಗಿಗಳು ಈ ಆಹಾರಗಳನ್ನು ಸೇವಿಸಬಾರದು, ಈಗಿನಿಂದಲೇ ಅಂತರ ಕಾಯ್ದುಕೊಳ್ಳಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಥೈರಾಯ್ಡ್ ರೋಗಿಗಳು ಈ ಆಹಾರಗಳನ್ನು ಸೇವಿಸಬಾರದು, ಈಗಿನಿಂದಲೇ ಅಂತರ ಕಾಯ್ದುಕೊಳ್ಳಿ…!

ಥೈರಾಯ್ಡ್ ಸಮಸ್ಯೆ ಅನೇಕರಲ್ಲಿ ಇರುತ್ತದೆ. ಒಮ್ಮೆ ಈ ತೊಂದರೆ ಕಾಣಿಸಿಕೊಂಡರೆ ಜೀವನಪರ್ಯಂತ ಔಷಧ ಸೇವಿಸಲೇಬೇಕು. ಇದರ ಜೊತೆಜೊತೆಗೆ ಥೈರಾಯ್ಡ್‌ ಸಮಸ್ಯೆ ಮತ್ತಷ್ಟು ಉಲ್ಬಣವಾಗದಂತೆ ಎಚ್ಚರ ವಹಿಸಬೇಕು. ಥೈರಾಯ್ಡ್‌ ತೊಂದರೆ ಇರುವವರು ಕೆಲವೊಂದು ನಿರ್ದಿಷ್ಟ ಆಹಾರಗಳಿಂದ ಸಂಪೂರ್ಣವಾಗಿ ದೂರವಿರಬೇಕು. ಈ ಆಹಾರಗಳು ಥೈರಾಯ್ಡ್ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು ಮತ್ತು ಸಮಸ್ಯೆಗಳನ್ನು ಉಂಟುಮಾಡಬಹುದು.

ಸೋಯಾ – ಥೈರಾಯ್ಡ್ ರೋಗಿಗಳು ಸೋಯಾ ತಿನ್ನಲೇಬಾರದು. ಏಕೆಂದರೆ ಸೋಯಾದಲ್ಲಿ ಗೈಟ್ರೋಜನ್ ಎಂಬ ಅಂಶವಿದ್ದು, ಇದು ಥೈರಾಯ್ಡ್ ಗ್ರಂಥಿಗೆ ಹೆಚ್ಚಿನ ಹಾನಿಯನ್ನುಂಟು ಮಾಡುತ್ತದೆ.

ಸಂಸ್ಕರಿಸಿದ ಆಹಾರ – ಸಂಸ್ಕರಿಸಿದ ಆಹಾರಗಳು ಅಂದರೆ ನೂಡಲ್ಸ್, ಸಾಸ್, ಕೆಚಪ್, ಜಾಮ್, ಮ್ಯಾಜಿಕ್ ಮಸಾಲಾ ಮುಂತಾದವು ಥೈರಾಯ್ಡ್ ರೋಗಿಗಳಿಗೆ ಹಾನಿ ಮಾಡುತ್ತವೆ.

ಎಲೆಕೋಸು – ಬ್ರಾಸಿಕಾ ವೆಜ್ಜೀಸ್ ಎಂದು ಕರೆಯಲ್ಪಡುವ ಎಲೆಕೋಸು, ಹೂಕೋಸು, ಬ್ರೊಕೊಲಿಯಂತಹ ತರಕಾರಿಗಳನ್ನು ಥೈರಾಯ್ಡ್‌ ತೊಂದರೆ ಇರುವವರು ತಿನ್ನಬಾರದು. ಈ ತರಕಾರಿಗಳು ಥೈರಾಯ್ಡ್‌ನ ಸಾಮಾನ್ಯ ಕಾರ್ಯಚಟುವಟಿಕೆಗೆ ಅಡ್ಡಿಪಡಿಸುವ ಗೈಟ್ರೋಜೆನ್‌ಗಳೆಂಬ ಎಂಟಿ-ಥೈರಾಯ್ಡ್ ಸಂಯುಕ್ತಗಳಲ್ಲಿ ಸಮೃದ್ಧವಾಗಿವೆ.

ಜಂಕ್‌ ಫುಡ್‌ – ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿರುವವರು ಜಂಕ್ ಫುಡ್, ಫಾಸ್ಟ್ ಫುಡ್‌ನಿಂದ ಸಂಪೂರ್ಣವಾಗಿ ದೂರವಿರಬೇಕು. ಈ ರೀತಿಯ ಆಹಾರವು ಸಾಮಾನ್ಯವಾಗಿ ಬಹಳಷ್ಟು ಕೊಬ್ಬು, ಉಪ್ಪು ಮತ್ತು ಕ್ಯಾಲೊರಿಗಳನ್ನು ಹೊಂದಿರುತ್ತದೆ. ಇದು ಥೈರಾಯ್ಡ್ ಗ್ರಂಥಿಗೆ ಒಳ್ಳೆಯದಲ್ಲ.

ಕೆಫೀನ್‌ – ಕೆಫೀನ್, ಥೈರಾಯ್ಡ್ ಹಾರ್ಮೋನ್ ಉತ್ಪಾದಿಸುವ ಪ್ರಕ್ರಿಯೆಯ ಮೇಲೆ ಕೆಟ್ಟದಾಗಿ ಪರಿಣಾಮ ಬೀರುತ್ತದೆ. ಕೆಫೀನ್‌ ಸೇವನೆಯಿಂದ ಹಾರ್ಮೋನ್ ಮಟ್ಟವು ಹದಗೆಡಬಹುದು.

 

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...