
ಲಕ್ಷ್ಮಿಯು ಸಂತೋಷಗೊಂಡರೆ ಬಡವ ಶ್ರೀಮಂತನಾಗಲು ಹೆಚ್ಚು ಸಮಯ ಬೇಡ ಎಂಬುದು ಭಕ್ತರ ನಂಬಿಕೆ. ಈ ಕಾರಣಕ್ಕಾಗಿಯೇ ಎಲ್ಲರೂ ಮಾತೆ ಲಕ್ಷ್ಮಿಯ ಆಶೀರ್ವಾದವನ್ನು ಪಡೆಯಲು ಬಯಸುತ್ತಾರೆ. ಇದಕ್ಕಾಗಿ ಸಾಕಷ್ಟು ಪೂಜೆ ಮತ್ತು ಪುನಸ್ಕಾರಗಳನ್ನು ಸಹ ಮಾಡುತ್ತಾರೆ. ಆದರೆ ಅನೇಕ ಬಾರಿ ಸಣ್ಣಪುಟ್ಟ ತಪ್ಪುಗಳಿಂದಾಗಿ ಮಾತೆ ಲಕ್ಷ್ಮಿ ಮನೆ ಬಿಟ್ಟು ಹೋಗುತ್ತಾಳೆ, ಮರಳಿ ಬರುವುದೇ ಇಲ್ಲ. ಕೆಲವು ಅನುಪಯುಕ್ತ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಲಕ್ಷ್ಮಿ ನಮ್ಮ ಮೇಲೆ ಕೃಪೆ ತೋರುವುದಿಲ್ಲ. ಸ್ವಚ್ಛತೆ ಬಗ್ಗೆ ಕಾಳಜಿ ವಹಿಸದೇ ಬೇಡದ ವಸ್ತುಗಳನ್ನು ತುಂಬಿಸಿಟ್ಟುಕೊಂಡರೆ ಅಂತಹ ಮನೆಯಲ್ಲಿ ಲಕ್ಷ್ಮಿ ವಾಸವಿರುವುದಿಲ್ಲ.
ಹರಿದ ಪಾದರಕ್ಷೆ – ಕೆಲವರು ಹಳೆಯ ಹರಿದ ಶೂ ಮತ್ತು ಚಪ್ಪಲಿಗಳನ್ನು ಸಹ ಮನೆಯಲ್ಲಿ ಇಟ್ಟುಕೊಂಡಿರುತ್ತಾರೆ. ಹರಿದ ಹಳೆಯ ಬೂಟುಗಳು ಮತ್ತು ಚಪ್ಪಲಿಗಳನ್ನು ಮನೆಯಿಂದ ಹೊರಗೆ ಎಸೆಯುವುದು ಅವಶ್ಯಕ. ಇವುಗಳನ್ನು ಮನೆಯಲ್ಲೇ ಇಟ್ಟುಕೊಳ್ಳುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಸುಳಿದಾಡುತ್ತದೆ. ಲಕ್ಷ್ಮಿಯ ಆಶೀರ್ವಾದ ಸಿಗುವುದಿಲ್ಲ.
ಒಡೆದ ಪಾತ್ರೆಗಳು – ಮನೆಯಲ್ಲಿ ಒಡೆದ ಪಾತ್ರೆಗಳನ್ನು ಇಡುವುದು ಕೂಡ ಅಶುಭವೆಂದು ಪರಿಗಣಿಸಲಾಗಿದೆ. ಮನೆಯಲ್ಲಿ ಒಡೆದ ಅಥವಾ ಅನುಪಯುಕ್ತ ಸ್ಟೀಲ್, ಪ್ಲಾಸ್ಟಿಕ್, ತಾಮ್ರದ ಪಾತ್ರೆಗಳಿದ್ದರೆ ಅವುಗಳನ್ನು ಹೊರಗೆ ಹಾಕಿ, ಅಥವಾ ಸ್ಕ್ರ್ಯಾಪ್ನವರಿಗೆ ಮಾರಾಟ ಮಾಡಿ.
ಭಗ್ನಗೊಂಡ ವಿಗ್ರಹ – ಭಗ್ನಗೊಂಡಿರುವ ದೇವರ ವಿಗ್ರಹ ಅಥವಾ ಇತರ ಯಾವುದೇ ಪ್ರತಿಮೆಯನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು. ಮನೆಯಲ್ಲಿ ಇಂತಹ ಮೂರ್ತಿಗಳನ್ನು ಇಟ್ಟುಕೊಳ್ಳುವುದರಿಂದ ವಾಸ್ತು ದೋಷ ಹೆಚ್ಚಾಗುತ್ತದೆ. ತಾಯಿ ಲಕ್ಷ್ಮಿ ಅಸಂತೋಷಗೊಳ್ಳುತ್ತಾಳೆ. ಸಂಜೆಯ ವೇಳೆ ಮನೆಯಲ್ಲಿ ಎಲ್ಲಿಯೂ ಕತ್ತಲೆ ಇರಬಾರದು. ಮನೆಯಲ್ಲಿ ಕತ್ತಲಾದರೆ ತಾಯಿ ಲಕ್ಷ್ಮಿ ಬರುವುದಿಲ್ಲ.
ನಿಂತು ಹೋದ ಅಥವಾ ಕೆಟ್ಟು ಹೋದ ಗಡಿಯಾರ – ನಿಂತು ಹೋದ ಗಡಿಯಾರ ಅಥವಾ ಕೆಟ್ಟು ಹೋಗಿರುವ ಗಡಿಯಾದ ಅದೃಷ್ಟದ ನಿಲುಗಡೆಯ ಸಂಕೇತವಾಗಿದೆ. ಇಂತಹ ಗಡಿಯಾರವನ್ನು ಮನೆಯಲ್ಲಿ ಇಡುವುದು ಮಂಗಳಕರವಲ್ಲ. ಗಡಿಯಾರವನ್ನು ಸರಿಪಡಿಸಿ, ಬೇಡದೇ ಹೋದಲ್ಲಿ ಎಸೆದುಬಿಡಿ. ಕೆಟ್ಟು ಹೋದ ಗಡಿಯಾರವನ್ನ ಮನೆಯಲ್ಲಿಟ್ಟರೆ ಮಾತೆ ಲಕ್ಷ್ಮಿಯ ಕೋಪಕ್ಕೆ ತುತ್ತಾಗಬಹುದು.