ಮನೆಯಲ್ಲಿ ಸಣ್ಣ ಮಗುವಿದ್ದರೆ ಅದಕ್ಕೆ ಬೇಬಿ ಪೌಡರ್ ನ್ನು ಬಳಸುತ್ತಾರೆ. ಕೆಲವೊಮ್ಮೆ ಈ ಪೌಡರ್ ಅವಧಿ ಮುಗಿದ ಕಾರಣ ಅದನ್ನು ಎಸೆಯುತ್ತಾರೆ. ಆದರೆ ಪೌಡರ್ ಎಸೆಯುವ ಬದಲು ಅದನ್ನು ಈ ಕೆಲಸಗಳಿಗೆ ಬಳಸಬಹುದು.
*ಮನೆಯಲ್ಲಿ ಇರುವೆಗಳು ಗೂಡು ಕಟ್ಟಿದ್ದರೆ ಅದನ್ನು ಓಡಿಸಲು ಈ ಪೌಡರ್ ನ್ನು ಇರುವೆಗಳ ಗೂಡಿಗೆ ಸಿಂಪಡಿಸಿ. ಇದರಿಂದ ಇರುವೆಗಳು ಓಡಿಹೋಗುತ್ತವೆ.
*ನಿಮ್ಮ ಬೂಟುಗಳಲ್ಲಿ ಬೆವರಿನ ವಾಸನೆ ಬರುತ್ತಿದ್ದರೆ ಅದನ್ನು ನಿವಾರಿಸಲು ಬೂಟಿನ ಒಳಗಡೆ ಬೇಬಿ ಪೌಡರ್ ಅನ್ನು ಸಿಂಪಡಿಸಿ. ಇದರಿಂದ ಬೂಟಿನಿಂದ ಬರುವ ವಾಸನೆ ಕಡಿಮೆಯಾಗುತ್ತದೆ.
*ಮನೆಯಲ್ಲಿ ಹೂ, ತರಕಾರಿ ಗಿಡಗಳನ್ನು ಬೆಳೆಸಿದಾಗ ಅದಕ್ಕೆ ಕೀಟಗಳು ಬಂದಿದ್ದರೆ ಅದನ್ನು ಓಡಿಸಲು ಗಿಡಗಳ ಮೇಲೆ ಬೇಬಿ ಪೌಡರ್ ನ್ನು ಸಿಂಪಡಿಸಿ. ಇದರಿಂದ ಗಿಡಗಳಿಗೆ ಯಾವುದೇ ಹಾನಿಯಾಗದೆ ಕೀಟದ ಸಮಸ್ಯೆ ನಿವಾರಣೆಯಾಗುತ್ತದೆ.
*ಬೀರುವಿನಲ್ಲಿಟ್ಟ ಬಟ್ಟೆಗಳಿಂದ ವಿಚಿತ್ರವಾದ ವಾಸನೆಗಳು ಬರುತ್ತಿದ್ದರೆ ಅದನ್ನು ನಿವಾರಿಸಲು ಒಂದು ಬಾಕ್ಸ್ ನಲ್ಲಿ ಬೇಬಿ ಪೌಡರ್ ನ್ನು ತುಂಬಿಸಿಟ್ಟುಕೊಳ್ಳಿ. ಇದರಿಂದ ಬಟ್ಟೆಯ ವಾಸನೆ ನಿವಾರಣೆಯಾಗುತ್ತದೆ.