
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕಳಸವಳ್ಳಿ ಸಮೀಪ ಶರಾವತಿ ಇನ್ನಿರಿನಲ್ಲಿ ತೆಪ್ಪ ಮಗುಚಿ ಮೂವರು ಯುವಕರು ನಾಪತ್ತೆಯಾಗಿದ್ದಾರೆ.
ರಾಜು, ಸಂದೀಪ್ ಭಟ್, ಚೇತನ್ ನಾಪತ್ತೆಯಾದವರು ಎಂದು ಹೇಳಲಾಗಿದೆ. ನವೀನ್ ಮತ್ತು ಯಶವಂತ ಈಜಿಕೊಂಡು ದಡ ಸೇರಿದ್ದಾರೆ. ಶರಾವತಿ ನೀರಿನಲ್ಲಿ ಮೂವರು ಯುವಕರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ತೆಪ್ಪದಲ್ಲಿ ಐವರು ಯುವಕರು ಪ್ರಯಾಣಿಸುತ್ತಿದ್ದರು. ಶರಾವತಿ ಹಿನ್ನೀರಿನಲ್ಲಿ ನಾಪತ್ತೆಯಾದವರಿಗಾಗಿ ಅಗ್ನಿಶಾಮಕ ದಳ ಸಿಬ್ಬಂದಿ, ಪೊಲೀಸರು ಸ್ಥಳೀಯರೊಂದಿಗೆ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.