ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಪವಿತ್ರ ಶ್ರಾವಣ ಮಾಸದಲ್ಲಿ ಭಕ್ತರು ಶಿವನ ಆರಾಧನೆ ಮಾಡ್ತಾರೆ. ಆದ್ರೆ ಇಲ್ಲಿ ಮೂವರು ಮಹಿಳೆಯರು ಶಿವಲಿಂಗವನ್ನು ಇಟ್ಟಿಗೆ ಮತ್ತು ಸಿಮೆಂಟ್‌ನಿಂದ ಮುಚ್ಚಿದ್ದಾರೆ.
ಗ್ವಾಲಿಯರ್‌ನ ಸಿಟಿ ಸೆಂಟರ್‌ನಲ್ಲಿರುವ ಶಿವ ದೇವಾಲಯದಲ್ಲಿ ನಡೆದಿದೆ. ಬೆಳಿಗ್ಗೆ ದೇವಸ್ಥಾನಕ್ಕೆ ಬಂದ ಭಕ್ತರು, ಶಿವಲಿಂಗ ಕಾಣದಿರೋದನ್ನು ನೋಡಿ ದಂಗಾಗಿದ್ದಾರೆ. ಲಿಂಗವನ್ನು ಸಿಮೆಂಟ್ ನಿಂದ ಮುಚ್ಚಿರೋದು ಕಾಣಿಸ್ತಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಮೂವರು ಆರೋಪಿ ಮಹಿಳೆಯರನ್ನು ಬಂಧಿಸಲಾಗಿದೆ.
ಕೃಷ್ಣಾ ದೇವಿ ಎಂಬ ಹೆಸರಿನ ಮಹಿಳೆಗೆ ಕನಸಿನಲ್ಲಿ ಶಿವ ಕಾಣಿಸಿಕೊಂಡಿದ್ದನಂತೆ. ಶಿವಲಿಂಗ ಒಳಗೆ ಬೆಳೆಯಲು ಅವಕಾಶ ಬೇಕು ಹಾಗಾಗಿ ಶಿವಲಿಂಗವನ್ನು ಮುಚ್ಚು ಎಂದು ಸೂಚನೆ ನೀಡಿದ್ದನಂತೆ. ಆಕೆ ಮಾತಿನ ಪ್ರಕಾರ, ಉಳಿದ ಇಬ್ಬರು ಮಹಿಳೆಯರು ಕೃಷ್ಣಾಗೆ ಸಹಾಯ ಮಾಡಿದ್ದಾರೆ.
ಕೃಷ್ಣಾ ದೇವಿ ಶಿವಲಿಂಗವನ್ನು ಮುಚ್ಚಿರೋದನ್ನು ಒಪ್ಪಿಕೊಂಡಿದ್ದಾಳೆ. ಮೂವರು ಮಹಿಳೆಯರ ಮಾನಸಿಕ ಸ್ಥಿತಿ ಸಹಜವಾಗಿಲ್ಲ. ಅವರು, ದೇವಸ್ಥಾನಕ್ಕೆ ಜನರು ಬರದಂತೆ ತಡೆಯುತ್ತಿದ್ದರು ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.