ಬೆಂಗಳೂರು : ತುಮಕೂರಿನ ಪಾವಗಡ ತಾಲೂಕು ಆಸ್ಪತ್ರೆಯಲ್ಲಿ ಒಂದೇ ದಿನ ಶಸ್ತ್ರಚಿಕಿತ್ಸೆಗೆ ಮೂವರು ಮಹಿಳೆಯರು ಮೃತಪಟ್ಟಿರುವ ವರದಿಗೆ ಸಂಬಂಧಿಸಿದಂತೆ ಕೂಲಂಕಷವಾಗಿ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ.
NHM ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರಾದ ಡಾ.ಪೂಜಾ ಹೆಚ್.ಎಂ, ಶುಶ್ರೂಷಾಧಿಕಾರಿ ಪದ್ಮಾವತಿ ಮತ್ತು ಒ.ಟಿ ತಂತ್ರಜ್ಞರಾದ ಕಿರಣ್ ಬಿ.ಆರ್ ಇವರನ್ನು ಕರ್ತವ್ಯದಿಂದ ವಜಾಗೊಳಿಸಲಾಗಿದೆ.
ಅಲ್ಲದೇ, ಕರ್ತವ್ಯಲೋಪ ಆರೋಪದ ಮೇಲೆ ಶುಶ್ರೂಷಾಧಿಕಾರಿಗಳಾದ ನಾಗರತ್ನಮ್ಮ.ಕೆ. ಮತ್ತು ಮಾರಕ್ಕ.ಬಿ. ಇವರನ್ನು ಸೇವೆಯಿಂದ ಅಮಾನತ್ತುಗೊಳಿಸಿ ಆದೇಶಿಸಲಾಗಿದೆ.