ಮನಸ್ಸಿದ್ದಲ್ಲಿ ಮಾರ್ಗ ಎಂಬ ಗಾದೆಯು ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯ ಮೂವರು ಬುಡಕಟ್ಟು ಸಮುದಾಯದ ಹುಡುಗಿಯರ ಪಾಲಿಗೆ ಜೀವನದ ಮಂತ್ರವಾಗಿ ಮಾರ್ಪಟ್ಟು ಫಲನೀಡಿದೆ.
ತಂದೆ-ತಾಯಿಯು ಟೀ ಎಸ್ಟೇಟ್‌ಗಳಲ್ಲಿ ಕೂಲಿ ಕೆಲಸ ಮಾಡಿಕೊಂಡು ದಿನಕ್ಕೆ 200 ರೂ. ಪಡೆಯುವವರಾಗಿದ್ದರೂ, ಅವರ ಮಕ್ಕಳು ಮಾತ್ರ ರಾಷ್ಟ್ರೀಯ ರಗ್ಬಿ ತಂಡಕ್ಕೆ ಆಯ್ಕೆಯಾಗಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.
ಮೂವರು ಹುಡುಗಿಯರು ಮಾತ್ರವಲ್ಲದೇ ಈ ಜಲ್ಪೈಗುರಿ ಜಿಲ್ಲೆಯ ಅನೇಕ ಹುಡುಗ, ಹುಡುಗಿಯರು ಶ್ರಮವಹಿಸಿ ರಾಷ್ಟ್ರೀಯ ರಗ್ಬಿ ತಂಡಕ್ಕೆ ಆಯ್ಕೆ ಆಗುತ್ತಿದ್ದಾರೆ. ಈ ಸಾಧನೆ ಹಿಂದಿನ ಶಕ್ತಿಯ ಹೆಸರು ಜಂಗಲ್ ಕ್ರೋಸ್ ಪ್ರತಿಷ್ಠಾನ.
ಈ ಎನ್‌ಜಿಒ ವತಿಯಿಂದ ರೋಶನ್ ಖಾಖಾ ಎಂಬ ತರಬೇತುದಾರರು 15ಕ್ಕೂ ಹೆಚ್ಚು ಯುವತಿಯರಿಗೆ ಜಲ್ಪೈಗುರಿಯಲ್ಲಿ ರಗ್ಬಿ ತರಬೇತಿ ನೀಡುತ್ತಿದ್ದಾರೆ. ಜತೆಗೆ ಮುಖ್ಯವಾಹಿನಿಯ ಶಿಕ್ಷಣದಿಂದಲೂ ಕೂಡ ಅವರು ವಂಚಿತರಾಗದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ಸದ್ಯಕ್ಕೆ ಜಂಗಲ್ ಕ್ರೋಸ್ ನೆರವಿನಿಂದ ರಾಷ್ಟ್ರೀಯ ರಗ್ಬಿ ತಂಡದಲ್ಲಿ ಹೆಸರು ಮಾಡಿರುವವರು ರಶ್ಮಿತಾ ಒರಾವೊ.
BIG NEWS: 2 ಡೋಸ್ ಲಸಿಕೆ ಪಡೆದವರಿಗೆ ‘ಬೂಸ್ಟರ್’ನಿಂದ ರಕ್ಷಣೆ ಬಗ್ಗೆ ಪುರಾವೆ ಇಲ್ಲ
ತರಬೇತುದಾರ ರೋಶನ್ ಅವರ ಪ್ರಕಾರ, ಕೇಂದ್ರ ಸರಕಾರದ ಖೇಲೋ ರಗ್ಬಿ ಯೋಜನೆ ಮೂಲಕ ಸಾಕಷ್ಟು ಹಣಕಾಸು ನೆರವು ಸಿಗುತ್ತಿದೆ. ಆದರೂ, ಪಶ್ಚಿಮ ಬಂಗಾಳ ಸರ್ಕಾರವು ನಿಗಾವಹಿಸಿ, ವಿವಿಧ ಯೋಜನೆಗಳ ಮೂಲಕ ರಗ್ಬಿಗೆ ನೆರವು ನೀಡಿದಲ್ಲಿ ಪಶ್ಚಿಮ ಬಂಗಾಳವು ದೇಶ-ವಿದೇಶಗಳಲ್ಲಿ ಹೆಸರು ಮಾಡುವುದು ನಿಶ್ಚಿತ ಎಂದಿದ್ದಾರೆ.
2010ರಲ್ಲಿ ಆರಂಭಗೊಂಡ ಜಂಗಲ್ ಕ್ರೋಸ್ ಪ್ರತಿಷ್ಠಾನಕ್ಕೆ ಬೆಳೆಯಲು ನೆರವು ನೀಡಿದವರು ಪರೀಶ್ ಪ್ರೀಸ್ಟ್. ಕ್ರೀಡಾ ಸ್ಫೂರ್ತಿ ಇರುವ ಬಡಕುಟುಂಬಗಳ ಮಕ್ಕಳಿಗೆ ಉತ್ತೇಜನದ ಜತೆಗೆ ಅವರ ಶಿಕ್ಷಣಕ್ಕೂ ಅಗತ್ಯ ನೆರವನ್ನು ಪ್ರತಿಷ್ಠಾನ ವತಿಯಿಂದ ನೀಡಲಾಗುತ್ತಿದೆ.