ನವದೆಹಲಿ: ವಿವಿಧ ರೀತಿಯ ಪಾಪ್ ಕಾರ್ನ್ ಗಳ ಮೇಲೆ ಪ್ರತ್ಯೇಕ ಜಿಎಸ್ಟಿ ಹೇರಿದ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಕೇವಲ ಉಪ್ಪು, ಮಸಾಲೆ ಬೆರೆಸಿದ ಪಾಪ್ಕಾರ್ನ್ ಮೇಲೆ ಶೇಕಡ 5ರಷ್ಟು, ಪ್ಯಾಕ್ ಮಾಡಿದ ಮತ್ತು ಬ್ರಾಂಡೆಡ್ ಪಾಪ್ಕಾರ್ನ್ ಮೇಲೆ ಶೇಕಡ 12ರಷ್ಟು, ಮಿಠಾಯಿ ಎಂದು ಪರಿಗಣಿಸಿದ ಕ್ಯಾರಮೆಲ್ ಪಾಪ್ಕಾರ್ನ್ ಗಳಿಗೆ ಶೇಕಡ 18ರಷ್ಟು ಸರಕು ಮತ್ತು ಸೇವಾ ತೆರಿಗೆ(GST) ವಿಧಿಸುವ ಕುರಿತಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ನಡೆದ ಜಿಎಸ್ಟಿ ಕೌನ್ಸಿಲ್ ಸಭೆ ಶನಿವಾರ ಘೋಷಣೆ ಮಾಡಿದ್ದಾರೆ.
ಇದಕ್ಕೆ ಆರ್ಥಿಕ ತಜ್ಞರು, ವಿರೋಧ ಪಕ್ಷದ ನಾಯಕರು, ಕಾಂಗ್ರೆಸ್ ನಾಯಕರು, ಉದ್ಯಮಿಗಳು ಸೇರಿದಂತೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ.