ನವದೆಹಲಿ: ಭಾರತೀಯ ವಾಯುಸೇನೆಯ ಮೂವರು ಅಧಿಕಾರಿಗಳನ್ನು ವಜಗೊಳಿಸಲಾಗಿದೆ. ಬ್ರಹ್ಮೋಸ್ ಕ್ಷಿಪಣಿ ಮಿಸ್ ಫೈರಿಂಗ್ ಪ್ರಕರಣದಲ್ಲಿ ಅಧಿಕಾರಿಗಳನ್ನು ವಜಾ ಮಾಡಲಾಗಿದೆ.
2022ರ ಮಾರ್ಚ್ 9 ರಂದು ಕ್ಷಿಪಣಿ ಮಿಸ್ ಫೈರ್ ಆಗಿತ್ತು. ಪಾಕಿಸ್ತಾನದ ಭೂಪ್ರದೇಶಕ್ಕೆ ಬ್ರಹ್ಮೋಸ್ ಕ್ಷಿಪಣಿ ಅಪ್ಪಳಿಸಿತ್ತು. ಭಾರತೀಯ ವಾಯುಸೇನೆಯ ಓರ್ವ ಗ್ರೂಪ್ ಕ್ಯಾಪ್ಟನ್ ವಿಂಗ್ ಕಮಾಂಡರ್ ರ್ಯಾಂಕ್ ನ ಇಬ್ಬರು ಅಧಿಕಾರಿಗಳನ್ನು ವಜಾಗೊಳಿಸಲಾಗಿದೆ. ಭಾರತೀಯ ವಾಯುಸೇನೆ ಮೂವರು ಅಧಿಕಾರಿಗಳನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ.
ಬ್ರಹ್ಮೋಸ್ ಕ್ಷಿಪಣಿ ಮಿಸ್ಫೈರಿಂಗ್ ಘಟನೆಗೆ ಮೂವರು ಅಧಿಕಾರಿಗಳನ್ನು ಪ್ರಾಥಮಿಕವಾಗಿ ಹೊಣೆಗಾರರನ್ನಾಗಿ ಮಾಡಲಾಗಿದೆ. ಅವರ ಸೇವೆಗಳನ್ನು ಕೇಂದ್ರ ಸರ್ಕಾರವು ತಕ್ಷಣವೇ ಜಾರಿಗೆ ಬರುವಂತೆ ಕೊನೆಗೊಳಿಸಿದೆ. ಇಂದು ಅಧಿಕಾರಿಗಳ ವಜಾಗೊಳಿಸುವ ಆದೇಶವನ್ನು ನೀಡಲಾಗಿದೆ ಎಂದು ಭಾರತೀಯ ವಾಯುಪಡೆ ತಿಳಿಸಿದ್ದು, ಸೇವೆಯಿಂದ ವಜಾಗೊಳಿಸಲಾದ ಅಧಿಕಾರಿಗಳಲ್ಲಿ ಗ್ರೂಪ್ ಕ್ಯಾಪ್ಟನ್, ವಿಂಗ್ ಕಮಾಂಡರ್ ಮತ್ತು ಸ್ಕ್ವಾಡ್ರನ್ ಲೀಡರ್ ಸೇರಿದ್ದಾರೆ.