ಪೊಲೀಸರು ಮತ್ತು ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ನಕ್ಸಲರು ಬಲಿಯಾಗಿರುವ ಘಟನೆ ಮಧ್ಯಪ್ರದೇಶದ ಬಾಲಘಾಟ್ ಜಿಲ್ಲೆ ಲಂಜಿ ತೆಹಸೀಲ್ ನಲ್ಲಿ ನಡೆದಿದೆ.
ಬಹೇಲಾ ಪೊಲೀಸ್ ಠಾಣೆ ವ್ಯಾಪ್ತಿಯ ಕಾಡ್ಲಾ ಗ್ರಾಮದ ಸಮೀಪ ಪೊಲೀಸರೊಂದಿಗೆ ನಕ್ಸಲರು ಮುಖಾಮುಖಿಯಾಗಿದ್ದು, ಈ ವೇಳೆ ಗುಂಡು ಹಾರಿಸಿದ್ದಾರೆ. ಪೊಲೀಸರು ಸಹ ಪ್ರತಿದಾಳಿ ನಡೆಸಿದ್ದು ಈ ವೇಳೆ ಓರ್ವ ಮಹಿಳೆ ಸೇರಿದಂತೆ ಮೂವರು ನಕ್ಸಲರು ಹತರಾಗಿದ್ದಾರೆ.
Big News: ಪ್ರವಾಹ ಸಂತ್ರಸ್ತರ ನೆರವಿಗೆ ಧಾವಿಸಿದ್ದ ಇಬ್ಬರು ಪೊಲೀಸರು ನೀರುಪಾಲು
ಈ ಮೂವರು 35ರಿಂದ 40 ವರ್ಷ ಆಸುಪಾಸಿನವರು ಎನ್ನಲಾಗಿದ್ದು ಬಹಳ ಕಾಲದಿಂದ ಪೊಲೀಸರ ವಾಂಟೆಡ್ ಲಿಸ್ಟ್ ನಲ್ಲಿದ್ದರು. ಈ ಪೈಕಿ ಓರ್ವನ ತಲೆ ಮೇಲೆ ಬಹುಮಾನದ ಘೋಷಣೆಯನ್ನೂ ಮಾಡಲಾಗಿತ್ತು ಎಂದು ಹೇಳಲಾಗಿದೆ.