alex Certify ಟರ್ಕಿ ಸಂಸತ್ ನಲ್ಲಿ ಸಂಸದರ ನಡುವೆ ಹೊಡೆದಾಟ : ರಕ್ತ ಚೆಲ್ಲುತ್ತಿರುವ ವಿಡಿಯೋ ‘ವೈರಲ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟರ್ಕಿ ಸಂಸತ್ ನಲ್ಲಿ ಸಂಸದರ ನಡುವೆ ಹೊಡೆದಾಟ : ರಕ್ತ ಚೆಲ್ಲುತ್ತಿರುವ ವಿಡಿಯೋ ‘ವೈರಲ್’

ಟರ್ಕಿ ಸಂಸತ್ತಿನಲ್ಲಿ ತೀವ್ರ ವಾಗ್ವಾದ ನಡೆದಿದೆ. ಸದನದಲ್ಲೇ ಸಂಸದರು ಪರಸ್ಪರ  ಗುದ್ದಾಡಿಕೊಂಡಿದ್ದಾರೆ. ಈ ಗಲಾಟೆ ಸುಮಾರು 30 ನಿಮಿಷಗಳ ಕಾಲ ನಡೆದಿದೆ. ಈ ವೇಳೆ ಮೂವರು ವಿರೋಧ ಪಕ್ಷದ ಸಂಸದರು ಗಾಯಗೊಂಡಿದ್ದಾರೆ. ಸ್ಪೀಕರ್ ವೇದಿಕೆಯ ಮೆಟ್ಟಿಲುಗಳ ಮೇಲೆ ರಕ್ತ ಚೆಲ್ಲುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ವಿರೋಧ ಪಕ್ಷದ ಸಂಸದರು ಟರ್ಕಿಯ ಅಧ್ಯಕ್ಷ ಎರ್ಡೋಗನ್ ಅವರ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಕರೆದರು. ಇದು ಗಲಾಟೆಗೆ ಕಾರಣವಾಯ್ತು. ಜಸ್ಟೀಸ್ ಅಂಡ್ ಡೆವಲಪ್‌ಮೆಂಟ್ ಪಾರ್ಟಿಯ ನಾಯಕರೊಬ್ಬರು ವಿರೋಧ ಪಕ್ಷದ ನಾಯಕ ಅಹ್ಮದ್ ಸಿಕ್ ಮೇಲೆ ಹಲ್ಲೆ ನಡೆಸಿದ್ರು.

ಸದನದಲ್ಲಿ ಅತಲೆ ಬಗ್ಗೆ ಚರ್ಚೆ ನಡೆಯುತ್ತಿತ್ತು. 2013 ರಲ್ಲಿ ಎರ್ಡೋಗನ್ ಸರ್ಕಾರದ ವಿರುದ್ಧ ಅತಲೆ ಪ್ರತಿಭಟಿಸಿದ್ದರು. ಇದರಲ್ಲಿ ಸಾಕಷ್ಟು ಹಿಂಸಾಚಾರ ನಡೆದಿತ್ತು. ಇದಾದ ನಂತರ ಅತಲೆಯನ್ನು ಬಂಧಿಸಲಾಯಿತು. ಅತಲೆ 2013ರಿಂದ ಜೈಲಿನಲ್ಲಿದ್ದಾರೆ. 2022 ರಲ್ಲಿ ಅವರಿಗೆ 18 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು.

ಕಳೆದ ವರ್ಷ ಮೇನಲ್ಲಿ ನಡೆದ ಚುನಾವಣೆಯಲ್ಲಿ ಅತಲೆ ಗೆಲುವು ಸಾಧಿಸಿದ್ದರು. ಅವರು ಎಡಪಂಥೀಯ ಟಿಐಪಿ ಪಕ್ಷದಿಂದ ಸಂಸದರಾದರು. ಇದು ಸಂಸತ್ತಿನಲ್ಲಿ ಮೂರು ಸ್ಥಾನಗಳನ್ನು ಹೊಂದಿದೆ. ಇದಾದ ನಂತರ ಎರ್ಡೋಗನ್ ಅವರ ಪಕ್ಷವು ಅತಲೆಯವರ ಸಂಸತ್ತಿನ ಸದಸ್ಯತ್ವವನ್ನು ತಿರಸ್ಕರಿಸುವ ಮಸೂದೆಯನ್ನು ತಂದಿತು. ಇದು ಕೋರ್ಟ್‌ ಮೆಟ್ಟಿಲೇರಿತ್ತು. ಆಗಸ್ಟ್ 1 ರಂದು, ಟರ್ಕಿಯ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು, ಇದರಲ್ಲಿ ಸಂಸತ್ತಿನ ನಿರ್ಧಾರವನ್ನು ರದ್ದುಗೊಳಿಸಲಾಗಿತ್ತು. ಅತಲೆ ಮತ್ತೆ ಸಂಸದರಾದರು.

ಅತಲೆ ಅವರನ್ನು ಜೈಲಿನಿಂದ ಬಿಡುಗಡೆ ಮಾಡುವಂತೆಯೂ ನ್ಯಾಯಾಲಯ ಆದೇಶಿಸಿದೆ. ವಾಸ್ತವವಾಗಿ, ಜೈಲಿನಲ್ಲಿರುವ ಕಾರಣ ತನ್ನ ಪ್ರದೇಶದಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅತಲೆ ನ್ಯಾಯಾಲಯದಲ್ಲಿ ಮನವಿ ಮಾಡಿದ್ದರು. 5 ವರ್ಷ ಜೈಲಿನಿಂದ ವಿನಾಯಿತಿ ನೀಡಬೇಕು. ಅವಧಿ ಮುಗಿದ ಬಳಿಕ ಮತ್ತೆ ಜೈಲಿಗೆ ಹೋಗಲಿದ್ದಾರೆ. ನ್ಯಾಯಾಲಯ ಅವರ ಬೇಡಿಕೆಯನ್ನು ಒಪ್ಪಿಕೊಂಡಿದೆ. ನ್ಯಾಯಾಲಯದ ಈ ತೀರ್ಪಿನ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆದಿದೆ. ಅತಲೆಯವರ ಸ್ವಂತ ಪಕ್ಷದ ನಾಯಕ ಅಹಮದ್ ಸಿಕ್ ಭಾಷಣ ಮಾಡುತ್ತಿದ್ದರು. ಆಡಳಿತ ಪಕ್ಷದ ಅನೇಕ ಸಂಸದರು ಅತಲೆಯನ್ನು ಭಯೋತ್ಪಾದಕ ಎಂದು ಕರೆದ್ರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...