alex Certify ಒಂದಲ್ಲ, ಎರಡಲ್ಲ 40 ಐಷಾರಾಮಿ ಕಾರು ಕಳವು ಮಾಡಿದ ಮೂವರು ಅಂದರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದಲ್ಲ, ಎರಡಲ್ಲ 40 ಐಷಾರಾಮಿ ಕಾರು ಕಳವು ಮಾಡಿದ ಮೂವರು ಅಂದರ್

ನವದೆಹಲಿ: ಅತ್ಯಾಧುನಿಕ ಹ್ಯಾಕಿಂಗ್ ಸಾಧನಗಳನ್ನು ಬಳಸಿಕೊಂಡು ಐಷಾರಾಮಿ ಕಾರುಗಳನ್ನು ಕಳವುಗೈದ ಆರೋಪದ ಮೇಲೆ ಒಟ್ಟು ಮೂವರನ್ನು ಬಂಧಿಸಲಾಗಿದೆ. ಕದ್ದ ಕಾರನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾಗ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಕದ್ದ ಕಾರನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಗಳನ್ನು ಉತ್ತಮ್ ನಗರ ನಿವಾಸಿಗಳಾದ ಮನೀಶ್ ರಾವ್ ಮತ್ತು ಜಗದೀಪ್ ಶರ್ಮಾ ಎಂದು ಗುರುತಿಸಲಾಗಿದೆ. ಮೂರನೇ ಆರೋಪಿಯನ್ನು ಮೀರತ್ ಮೂಲದ ಆಸ್ ಮೊಹಮ್ಮದ್ ಎಂದು ಗುರುತಿಸಲಾಗಿದ್ದು, ಪ್ರಾಥಮಿಕ ಮಾರಾಟಗಾರ ಎಂದು ಹೇಳಲಾಗಿದೆ.

ಸಿಐಡಿ ಅಧಿಕಾರಿಗಳಿಂದ ಮತ್ತೊಂದು ಬೇಟೆ: ಪಿಎಸ್ಐ ಅಭ್ಯರ್ಥಿಗಳಿಗೆ ಬ್ಲೂಟೂತ್, ಎಲೆಕ್ಟ್ರಾನಿಕ್ ಡಿವೈಸ್ ಕೊಡ್ತಿದ್ದ ಕಿಂಗ್ ಪಿನ್ ಸಹಚರ ಅರೆಸ್ಟ್

ಎಲ್ಲ ಆರೋಪಿಗಳು ಕ್ರಿಮಿನಲ್ ಹಿನ್ನೆಲೆಯವರು.

ರವಿ ಉತ್ತಮ್ ನಗರ ಗ್ಯಾಂಗ್‌ಗೆ ಸೇರಿದ ಆರೋಪಿಗಳು ಕದ್ದ ಕಾರುಗಳನ್ನು ಪತ್ತೆಹಚ್ಚಲು ಸಾಧ್ಯವಾಗದಂತೆ ನೋಡಿಕೊಳ್ಳಲು ಹ್ಯಾಕಿಂಗ್ ಸಾಧನ ಮತ್ತು ಜಿಪಿಎಸ್ ಜಾಮರ್‌ಗಳ ಮೂಲಕ ಐಷಾರಾಮಿ ಕಾರುಗಳನ್ನು ಅನ್ಲಾಕ್ ಮಾಡುವ ಕೆಲಸ‌ ಮಾಡುತ್ತಾರೆ.

ನಂತರ ಅವರು ಸಾಫ್ಟ್‌ವೇರ್ ಫಾರ್ಮ್ಯಾಟ್ ಮಾಡಿ ಇನ್ನೊಂದನ್ನು ಸ್ಥಾಪಿಸಿ, ಕದ್ದ ವಾಹನಗಳಿಗೆ ಹೊಸ ಕೀಗಳನ್ನು ನಿರ್ಮಿಸುತ್ತಾರೆ. ಇದಾಗಿ, ಸಿಸಿ ಟಿವಿ ಕವರೇಜ್ ಇಲ್ಲದ ಜಾಗದಲ್ಲಿ ಈ ಕಾರುಗಳನ್ನು ನಿಲ್ಲಿಸುತ್ತಿದ್ದರು. ಈ ವಾಹನಗಳನ್ನು ಮೀರತ್ ಮತ್ತು ರಾಜಸ್ಥಾನದಲ್ಲಿ ಮಾರಾಟ ಮಾಡುವುದನ್ನು ಈ ಗ್ಯಾಂಗ್‌ ರೂಢಿ ಮಾಡಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೂರು ಹುಂಡೈ ಕ್ರೆಟಾ ಸೇರಿ ಏಳು ಕಾರುಗಳನ್ನು ಸದ್ಯ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಈ ವರ್ಷದ ಏಪ್ರಿಲ್‌ನಿಂದೀಚೆಗೆ ದೆಹಲಿ-ಎನ್‌ಸಿಆರ್‌ನ ವಿವಿಧ ಭಾಗಗಳಿಂದ 40 ಕ್ಕೂ ಹೆಚ್ಚು ಕಾರುಗಳನ್ನು ಕಳವು ಮಾಡಿದ್ದಾರೆ.

ಆರೋಪಿಗಳಿಂದ ಎರಡು ಪಿಸ್ತೂಲ್‌ಗಳು ಮತ್ತು ಮದ್ದುಗುಂಡುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ, ಜೊತೆಗೆ ವಿವಿಧ ಹ್ಯಾಕಿಂಗ್ ಸಾಧನಗಳು, ಟೂಲ್‌ಕಿಟ್‌ಗಳು ಮತ್ತು ಮೂವತ್ತು ಕಾರ್ ಕೀಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನೈಋತ್ಯ ದೆಹಲಿಯ ಡಿಸಿಪಿ ಮನೋಜ್ ಸಿ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...