ದರೋಡೆ ಮಾಡುತ್ತಿದ್ದ ಮೂವರನ್ನು ದೆಹಲಿ ಪೊಲೀಸರು ವಸಂತ್ ವಿಹಾರ್ ನಲ್ಲಿ ಬಂಧಿಸಿದ್ದಾರೆ.
ಆರೋಪಿಗಳಾದ ಮೊಹಮದ್ ಇಸ್ರೇಲ್, ಪರ್ವೇಜ್ ಆಲಂ ಮತ್ತು ರಿದಮ್ ಪರ್ಚ ಎಲ್ಲರಿಗೂ ಸರಿ ಸುಮಾರು ಹದಿನೆಂಟು ವರ್ಷದ ಆಸುಪಾಸು. ಆರ್ ಕೆ ಪುರಂ ನಿವಾಸಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇವರು ದರೋಡೆ ಮಾಡಿ ಕದ್ದ ಹಣ ಮತ್ತು ಇತರೆ ಸಾಮಾಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅಚ್ಚರಿ ಎಂದರೆ ಇವರು ಕದ್ದಿದ್ದು ಪೊಲೀಸರ ಹಣ. ಶನಿವಾರ ರಾತ್ರಿ ಸಬ್ ಇನ್ಸ್ ಪೆಕ್ಟರ್ ಕುನಲ್ ಕುಮಾರ್ ಕರ್ತವ್ಯ ಮುಗಿಸಿ ಇಯಾತ ಮುನಿರ್ಕಾದಲ್ಲಿನ ತಮ್ಮ ಮನೆಗೆ ಬೈಕ್ ನಲ್ಲಿ ತೆರಳುತ್ತಿದ್ದಾಗ ವಸಂತ ವಿಹಾರ ಬಳಿ ಈ ಮೂವರು ದರೋಡೆಕೋರರು ಅವರ ತಲೆಗೆ ಹೊಡೆದು, ಅವರ ಬಳಿ ಇದ್ದ ಹಣ ಮತ್ತಿತರ ಬೆಲೆಬಾಳುವ ವಸ್ತುವನ್ನು ಕಿತ್ತುಕೊಂಡಿದ್ದರು.
BIG NEWS: ಜೆಡಿಎಸ್ ಗೆ ಸೆಡ್ಡು ಹೊಡೆದ ಸಿಎಂ; ಕಲಬುರ್ಗಿಯಲ್ಲಿ ಬಿಜೆಪಿಯವರೇ ಮೇಯರ್ ಆಗ್ತಾರೆ ಎಂದ ಬೊಮ್ಮಾಯಿ
ಸಬ್ ಇನ್ಸ್ಪೆಕ್ಟರ್ ದೂರಿನ ಮೇಲೆ ಸೆಕ್ಷನ್ 392 (ದರೋಡೆ) ಮತ್ತು ಇತರೆ ಕೇಸ್ ದಾಖಲು ಮಾಡಿಕೊಂಡು ಸಿಸಿಟಿವಿ ಫುಟೇಜ್ ಆಧಾರದ ಮೇಲೆ ಮತ್ತು ಸ್ಥಳೀಯರ ಸಹಾಯದಿಂದ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಕದ್ದ ಹಣ ಮತ್ತು ಇತರೆ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅದರಲ್ಲಿ ಸಬ್ ಇನ್ಸ್ಪೆಕ್ಟರ್ ಐಡಿ ಕಾರ್ಡ್, ಎಟಿಎಂ ಕಾರ್ಡ್, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸನ್ಸ್ ಹಾಗು ಹನ್ನೆರೆಡು ಸಾವಿರ ಹಣ ವಶಪಡಿಸಿಕೊಂಡಿದ್ದು, ಹದಿನಾರು ಸಾವಿರ ರೂಪಾಯಿಗಳಲ್ಲಿ ಕೊಂಡುಕೊಂಡ ಮೊಬೈಲ್ ಫೋನ್ ಕೂಡ ವಶಕ್ಕೆ ಪಡೆಯಲಾಗಿದೆ.