
ಕಿನ್ಶಾಸಾ(ಕಾಂಗೋ): ಪೂರ್ವ ಡೆಮಾಕ್ರೆಟಿಕ್ ರಿಪಬ್ಲಿಕ್ ಅಫ್ ಕಾಂಗೋ ದಕ್ಷಿಣ ಪ್ರಾಂತ್ಯದ ಕವುಮು ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ.
ಕಾಂಗೋ ಸ್ಥಳೀಯ ಕಾಲಮಾನ ಮಧ್ಯಾಹ್ನ 12 ಗಂಟೆಗೆ ಕವುಮು ವಿಮಾನ ನಿಲ್ದಾಣದಲ್ಲಿ ಅಪಘಾತ ಸಂಭವಿಸಿದೆ. ಕವುಮು ವಿಮಾನ ನಿಲ್ದಾಣದಿಂದ ಶಬುಂಡಾಗೆ ತೆರಳುತ್ತಿದ್ದ ವಿಮಾನ ಟೇಕ್ ಆಫ್ ಆದ ನಂತರ ಅಪಘಾತಕ್ಕೀಡಾಗಿದೆ. ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ವಿಮಾನ ಅಪಘಾತದಲ್ಲಿ ಮೃತಪಟ್ಟ ಮೂವರಲ್ಲಿ ಇಬ್ಬರು ಸಿಬ್ಬಂದಿ ಮತ್ತು ಓರ್ವ ಪ್ರಯಾಣಿಕ ಎಂದು ರೇಡಿಯೋ ಒಕಾಪಿ ತಿಳಿಸಿದೆ.