ದಾವಣಗೆರೆ: ದಾವಣೆಗರೆ ಜಿಲ್ಲಾ ಆಸ್ಪತ್ರೆಯ ಮೇಲ್ಚಾವಣಿ ಕಾಂಕ್ರಿಟ್ ಗಾರೆ ಪದರು ಕುಸಿದು ಎರಡು ವರ್ಷದ ಮಗು ಸೇರಿ ಮೂವರು ಗಾಯಗೊಂಡಿದ್ದಾರೆ.
ಜಿಲ್ಲಾಸ್ಪತ್ರೆ ಹಿಂಭಾಗದ ತುರ್ತು ಚಿಕಿತ್ಸಾ ಘಟಕ ಎದುರಿನ ಮುಖ್ಯ ಕಟ್ಟಡದಲ್ಲಿರುವ ಮೇಲ್ಚಾವಣಿಯ ಕಾಂಕ್ರೀಟ್ ಪದರು ಕಳಚಿ ಬಿದ್ದಿದೆ. ಘಟನೆಯಲ್ಲಿ ವಿಜಯನಗರ ಜಿಲ್ಲೆ ಹಲವಾಗಲು ನಿವಾಸಿಗಳಾದ ಪ್ರೇಮಕ್ಕ(46), ಕಾವೇರಿ(36) ನೇತ್ರಾ(2) ಗಾಯಗೊಂಡಿದ್ದಾರೆ.
ಮಗುವಿನ ತಲೆಗೆ ಮತ್ತು ಮಹಿಳೆಯರಿಬ್ಬರ ಕೈ, ಬೆನ್ನಿಗೆ ಪೆಟ್ಟಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಗಾಯಾಳುಗಳು ಆಸ್ಪತ್ರೆಗೆ ದಾಖಲಾಗಿದ್ದ ತಾಯಿಯ ಆರೋಗ್ಯ ವಿಚಾರಿಸಲು ಬಂದಿದ್ದ ವೇಳೆಯೇ ಘಟನೆ ನಡೆದಿದೆ. ಹಿರಿಯ ವೈದ್ಯಾಧಿಕಾರಿಗಳು ಪರಿಶೀಲನೆ ನಡೆಸಿದ್ದು, ಕ್ರಮಕ್ಕೆ ಸೂಚಿಸಿದ್ದಾರೆ.