ಮದ್ಯದ ನಶೆಯಲ್ಲಿ ಜನರು ಏನು ಬೇಕಾದ್ರೂ ಮಾಡ್ತಾರೆ. ಇದಕ್ಕೆ ಈ ಮೂವರು ಸ್ನೇಹಿತರು ಅತ್ಯುತ್ತಮ ಉದಾಹರಣೆ. ಮದ್ಯದ ನಶೆಯಲ್ಲಿ ಸ್ನೇಹಿತರು ಓಡ್ತಾ ಓಡ್ತಾ ಬೇರೆ ದೇಶವನ್ನು ತಲುಪಿದ್ದಾರೆ. ಒಂದಲ್ಲ ಎರಡಲ್ಲ ಬರೋಬ್ಬರಿ 400 ಕಿಲೋಮೀಟರ್ ಕ್ರಮಿಸಿದ್ದಾರೆ.
ಎಂದೂ ಕೇಳದ ಊರಿಗೆ ಮೂವರು ಸ್ನೇಹಿತರು ತಲುಪಿದ್ದಾರೆ. ಈ ಕೆಲಸ ನಮಗೆ ಖುಷಿ ನೀಡಿದೆ ಎಂದು ಅವರು ಹೇಳಿದ್ದಾರೆ. ವರದಿಯ ಪ್ರಕಾರ, ಬ್ರಾಗರ್, ಗೌಲ್ಡ್ ಮತ್ತು ಗೇಬ್ ಎಂಬ ಮೂವರು ಸ್ನೇಹಿತರು ಅಫ್ಘಾನಿಸ್ತಾನದ ಒಂದು ಮೂಲೆಯಲ್ಲಿ ಕುಳಿತು ಮದ್ಯದ ಪಾರ್ಟಿ ಮಾಡ್ತಿದ್ದರು. ಈ ವೇಳೆ ಏನಾದ್ರೂ ಸಾಹಸ ಮಾಡುವ ಆಲೋಚನೆ ಬಂದಿದೆ. ಮೂವರೂ ಚಾಲೆಂಜ್ ಮಾಡ್ಕೊಂಡಿದ್ದಾರೆ. ತಿರುಗುವ ಗೋಲ್ ಮೇಲೆ ಕೈ ಇಟ್ಟಿದ್ದಾರೆ. ಅಲ್ಲಿ ತೋರಿಸಿದ ಊರಿಗೆ ಪ್ರಯಾಣ ಬೆಳೆಸಿದ್ದಾರೆ.
ಸಾಹಸಕ್ಕಾಗಿ ಮೂವರೂ, ಪರ್ವತ ಪ್ರದೇಶಗಳನ್ನು ದಾಟಿದ್ದಾರೆ. 400 ಕಿಲೋಮೀಟರ್ ಓಡಿದ್ದಾರೆ. ಪ್ರಯಾಣದಲ್ಲಿ ಅನೇಕ ಸಮಸ್ಯೆ ಎದುರಿಸಿದ್ದಾರೆ. ನೆರೆಯ ರಾಷ್ಟ್ರವಾದ ತಜಕಿಸ್ತಾನವನ್ನು ತಲುಪಿದ್ದಾರೆ. ಜನವಸತಿ ಇಲ್ಲದ ಪ್ರದೇಶವನ್ನು ಅವರು ತಲುಪಿದ್ದಾರೆ.
ಬ್ರಾಗರ್, ಅಫ್ಘಾನ್ ಸೇನೆಯಿಂದ ನಿವೃತ್ತರಾಗಿದ್ದಾರೆ. ಕುಡಿದಾಗ ನನಗೆ ತಜಾಕಿಸ್ತಾನದ ಬಗ್ಗೆ ಯಾವುದೇ ಕಲ್ಪನೆ ಇರಲಿಲ್ಲ. ಆದರೆ 400 ಕಿಲೋಮೀಟರ್ ಓಡಲು ಯಶಸ್ವಿಯಾಗಿದ್ದೇವೆ. ಓಟದ ಆರಂಭದಲ್ಲಿ ಅವರ ಬಳಿ ನಕ್ಷೆ ಮತ್ತು ಮಾರ್ಗದ ಬಗ್ಗೆ ಯಾವುದೇ ಮಾಹಿತಿಯಿರಲಿಲ್ಲ. ಅನಾರೋಗ್ಯ, ಗಾಯ, ವೀಸಾ ಸಮಸ್ಯೆ ಸೇರಿದಂತೆ ಅನೇಕ ಸಮಸ್ಯೆ ಎದುರಿಸಬೇಕಾಯ್ತು ಎಂದು ಬ್ರಾಗರ್ ಹೇಳಿದ್ದಾರೆ.