ಕುನ್ಹೋ ರಾಷ್ಟ್ರೀಯ ಉದ್ಯಾನವನದಲ್ಲಿ ನಮೀಬಿಯಾದ ಚಿರತೆ ‘ಜ್ವಾಲಾ’ಗೆ ಮೂರು ಮರಿಗಳು ಜನಿಸಿವೆ. ನಮೀಬಿಯಾದ ಚಿರತೆ ಜ್ವಾಲಾ ಇತ್ತೀಚೆಗೆ ಮೂರು ಮರಿಗಳನ್ನು ಸ್ವಾಗತಿಸಿದೆ, ಆಶಾ ಎಂಬ ಮತ್ತೊಂದು ನಮೀಬಿಯಾದ ಚಿರತೆ ಇತ್ತೀಚೆಗೆ ಮರಿ ಹಾಕಿತ್ತು.
ಈ ಸಂತೋಷದ ಕ್ಷಣದ ವಿಡಿಯೋ ಹಂಚಿಕೊಂಡಿರುವ ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಅವರು, “ಕುನ್ಹೋದಲ್ಲಿ ಹೊಸ ಮರಿಗಳು! ಜ್ವಾಲಾ ಎಂಬ ಹೆಸರಿನ ನಮೀಬಿಯಾ ಚಿರತೆ ಮೂರು ಮರಿಗಳಿಗೆ ಜನ್ಮ ನೀಡಿದೆ. ನಮೀಬಿಯಾದ ಚಿರತೆ ಆಶಾ ತನ್ನ ಮರಿಗಳಿಗೆ ಜನ್ಮ ನೀಡಿದ ಕೆಲವೇ ವಾರಗಳಲ್ಲಿ ಈ ಬೆಳವಣಿಗೆ ನಡೆದಿದೆ. ದೇಶಾದ್ಯಂತ ಎಲ್ಲಾ ವನ್ಯಜೀವಿ ಮುಂಚೂಣಿ ಯೋಧರು ಮತ್ತು ವನ್ಯಜೀವಿ ಪ್ರೇಮಿಗಳಿಗೆ ಅಭಿನಂದನೆಗಳು. ಭಾರತದ ವನ್ಯಜೀವಿಗಳು ಅಭಿವೃದ್ಧಿ ಹೊಂದಲಿ ಎಂದು ತಿಳಿಸಿದ್ದಾರೆ.